ಬೆಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಜೆಡಿಎಸ್ ಪಕ್ಷಕ್ಕೆ ಬಿಗ್ ಶಾಕ್ ಎದುರಾಗಿದೆ. ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪರಮಾಪ್ತ, ಮಾಜಿ ಶಾಸಕ ಕೆ.ಪಿ ಬಚ್ಚೇಗೌಡ ಅವರು ಜೆಡಿಎಸ್ ತೊರೆದು, ಸಿಎಂ ಸಿದ್ಧರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಬೆಂಗಳೂರಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿವಾಸದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಪರಮಾಪ್ತ, ಕೆಪಿ ಬಚ್ಚೇಗೌಡ ಅವರು ಜೆಡಿಎಸ್ ಪಕ್ಷ ತೊರೆದು, ಕಾಂಗ್ರೆಸ್ ಪಕ್ಷವನ್ನು ಸಾಂಕೇತಿಕವಾಗಿ ಸೇರ್ಪಡೆಯಾಗಿದ್ದಾರೆ.
ಚಿಕ್ಕಬಳ್ಳಾಪುರದ ಜೆಡಿಎಸ್ ಮಾಜಿ ಶಾಸಕರಾಗಿರುವಂತ ಕೆ.ಪಿ ಬಚ್ಚೇಗೌಡ ಅವರು, ಏಪ್ರಿಲ್.2ರಂದು ಅಧಿಕೃತವಾಗಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳಲಿದ್ದಾರೆ.
ತಾಂಡಾಗಳನ್ನು `ಕಂದಾಯ ಗ್ರಾಮ’ಗಳೆಂದು ಮೊದಲು ಘೋಷಿಸಿದ್ದೆ ಕಾಂಗ್ರೆಸ್ : ಸಚಿವ ಪ್ರಿಯಾಂಕ್ ಖರ್ಗೆ