ಹುಬ್ಬಳ್ಳಿ: ಈಸ್ಟರ್ ಸಂಡೆಯ ನಡುವೆಯೂ ನಾಳೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಪರೀಕ್ಷೆ ನಡೆಸೋದಕ್ಕೆ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಗ್ಗೆ ನಿಮ್ಮ ಕನ್ನಡ ನ್ಯೂಸ್ ನೌ ಚುನಾವಣಾ ಹೊತ್ತಲ್ಲೇ ‘ಕಾನೂನು ವಿವಿ’ ಅವಾಂತರ: ಕಾಂಗ್ರೆಸ್ ಪಕ್ಷದ ವಿರುದ್ದ ತಿರುಗಿಬಿದ್ದ ‘ಕ್ರೈಸ್ತ ಸಮುದಾಯ’ ಎಂಬುದಾಗಿ ಸುದ್ದಿಯನ್ನು ಪ್ರಕಟಿಸಲಾಗಿತ್ತು. ಈ ಸುದ್ದಿಯ ಬೆನ್ನಲ್ಲೇ ನಾಳೆ ನಿಗದಿಯಾಗಿದ್ದಂತ ಕಾನೂನು ವಿವಿ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ.
ಇಂದು ಈ ಕುರಿತಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮೌಲ್ಯಮಾಪನದ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ. ಅದರಲ್ಲಿ ಕುಲಪತಿಗಳ ಆದೇಶದ ಮೇರೆಗೆ ದಿನಾಂಕ 31-03-2024ರ ಭಾನುವಾರದ ನಾಳೆ ಜರುಗಲಿರುವ ಪರೀಕ್ಷೆಗಳನ್ನು ಈಸ್ಟರ್ ಸಂಡೆ ಪ್ರಯುಕ್ತ ಮುಂದೂಡಲಾಗಿದೆ. ಈ ಪರೀಕ್ಷೆಯನ್ನು ನಡೆಸುವ ದಿನಾಂಕವನ್ನು ನಂತ್ರ ತಿಳಿಸಲಾಗುವುದು ಎಂದಿದ್ದಾರೆ.
ಈ ವಿಷಯವನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಎಲ್ಲಾ ಸಂಯೋಜಿತ ಮಹಾವಿದ್ಯಾಲಯದ ಪ್ರಾಂಶುಪಾಲರು, ಸಿಬ್ಬಂದಿಗಳಿಗೆ ಮತ್ತು ವಿದ್ಯಾರ್ಥಿಗಳ ಗಮನಕ್ಕೆ ತರುವಂತೆ ಸೂಚಿಸಿದ್ದಾರೆ.
BREAKING: ಏ.3ರಂದು ‘ಮಂಡ್ಯ’ದಲ್ಲೇ ಸಭೆ ಮಾಡಿ ‘ನನ್ನ ನಿರ್ಧಾರ’ ಪ್ರಕಟ – ಸುಮಲತಾ ಅಂಬರೀಶ್
SSLC ಪರೀಕ್ಷೆ: ಇಂದು ‘8.41 ಲಕ್ಷ ವಿದ್ಯಾರ್ಥಿ’ಗಳು ಹಾಜರ್, ಓರ್ವ ಡಿಬಾರ್ | SSLC Exam