ಬೆಂಗಳೂರು: ಲೋಕಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಸಿದ್ದತೆಗಳನ್ನು ರಾಜಕೀಯ ನಾಯಕರುಗಳು ಮಾಡಿಕೊಂಡಿದ್ದಾರೆ. ಈ ನಡುವೆ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನಲೆಯಲ್ಲಿ ಮಂಡ್ಯ ಲೋಕಸಭೆ ಸೀಟು ಜೆಡಿಎಸ್ ಪಾಲಾಗಿದೆ.
ಈ ನಡುವೆ ಸಹಜವಾಗಿ ಬಿಜೆಪಿ ಪರ ಕಾಣಿಸಿಕೊಂಡಿದ್ದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಕಣಕ್ಕೆ ಇಳಿಯುವ ಬಗ್ಗೆ ಇಂದು ತಮ್ಮ ನಿರ್ಧಾರವನ್ನು ಪ್ರಕಟ ಮಾಡಲಿದ್ದಾರೆ ಎನ್ನಲಾಗಿದೆ. ಕಳೆದ ಸಾರಿ ಲೋಕಸಭಾ ಚುನಾವಣೆ ಸುಮಲತಾ ಮತ್ತು ಜೆಡಿಎಸ್ ನಡುವಿನ ಯುದ್ದಕ್ಕೆ ಕಾರಣವಾಗಿತ್ತು, ಈ ನಡುವೆ ಸುಮಲತಾ ಅವರ ಗೆಲುವು ಜೆಡಿಎಸ್ ನಾಯಕರ ಆಕ್ರೋಶಕ್ಕೆ ಕೂಡ ಕಾರಣವಾಗಿತ್ತು. ಈ ನಡುವೆ ಈಗ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲುವನ್ನು ಕಾಣಲೇ ಬೇಕು ಎನ್ನುವ ಹಠಕ್ಕೆ ಬಿದ್ದು ಈ ಬಾರಿ ಕುಮಾರ ಸ್ವಾಮಿಯವರು ಮಂಡ್ಯದಿಂದ ಕಣಕ್ಕೆ ಇಳಿದಿದ್ದಾರೆ. . ಶನಿವಾರ 2.30 ಕ್ಕೆ ಬೆಂಬಲಿಗರ ಸಭೆಯಲ್ಲಿ ಬೆಂಬಲಿಗರ ನಿರ್ಧಾರದಂತೆ ನಡೆಯುತ್ತೇನೆ. ಕುಮಾರಸ್ವಾಮಿ ಅವರ ಭೇಟಿಗೆ ಸ್ವಾಗತವಿದೆ ಎಂದರು.