ಬೆಂಗಳೂರು: 5, 8 ಮತ್ತು 9ನೇ ತರಗತಿಯ ಮೌಲ್ಯಾಂಕನದ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಬಗ್ಗೆ ಆದೇಶವನ್ನು ಹೊರಡಿಸಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ(SA-2)ಮೌಲ್ಯಾಂಕನದ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ದಿನಾಂಕ:02.04.2024 ರೊಳಗೆ ಪ್ರತಿ ಮೌಲ್ಯಮಾಪಕರು ದಿನವೊಂದಕ್ಕೆ 5ನೇ ತರಗತಿಯ 80, 8ನೇ ತರಗತಿಯ 60 ಹಾಗೂ 9ನೇ ತರಗತಿಯ 40 ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಉಲ್ಲೇಖ(3) ರಲ್ಲಿ ತಿಳಿಸಲಾಗಿತ್ತು.
ಉಳಿದಂತೆ ಪ್ರಸ್ತುತ 8ನೇ ತರಗತಿಯ ಪ್ರತಿ ಮೌಲ್ಯಮಾಪಕರು ದಿನವೊಂದಕ್ಕೆ 50 ಹಾಗೂ 9ನೇ ತರಗತಿಯ ಪ್ರತಿ ಮೌಲ್ಯಮಾಪಕರು ದಿನವೊಂದಕ್ಕೆ 30 ಉತ್ತರ ಪತ್ರಿಕೆಗಳಂತೆ ಮೌಲ್ಯಮಾಪನವನ್ನು ಕೈಗೊಳ್ಳುವುದು ಹಾಗೂ ಉಲ್ಲೇಖ(3) ರ ಜ್ಞಾಪನ ಪತ್ರದಲ್ಲಿ ತಿಳಿಸಿದಂತೆ ಕ್ರಮವಹಿಸುವುದು, ಮುಂದುವರೆದು, ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆ-1 ರ ಕೊಠಡಿ ಮೇಲ್ವಿಚಾರಣಾ ಕಾರ್ಯ ಹಾಗೂ ಚುನಾವಣಾ ಕಾರ್ಯಗಳನ್ನು ಮುಂದಿನ ದಿನಗಳಲ್ಲಿ ನಿರ್ವಹಿಸಬೇಕಿರುವುದರಿಂದ ಯಾವುದೇ ವಿಳಂಬಕ್ಕೆ ಅಶ್ವದ ನೀಡದಂತೆ ನಿಗದಿತ ಕಾಲಾವಧಿಯೊಳಗೆ 5, 8 ಮತ್ತು 9ನೇ ತರಗತಿಯ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಲು ಸಂಬಂಧಿಸಿದ ಎಲ್ಲಾ ಜಿಲ್ಲಾ ಉಪನಿರ್ದಶಕರು(ಅಭಿವೃದ್ಧಿ) ಹಾಗೂ ಎಲ್ಲಾ ಬ್ಲಾಕುಗಳ ಕ್ಷೇತ್ರಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮವಹಿಸುವುದು ಅಂತ ತಿಳಿಸಿದೆ.