ಆಗ್ರಾ: ತಾಜ್ ಮಹಲ್ ಅನ್ನು ತೇಜೋ ಮಹಾಲಯ ಎಂದು ಘೋಷಿಸುವಂತೆ ಕೋರಿ ಉತ್ತರ ಪ್ರದೇಶದ ಆಗ್ರಾ ನ್ಯಾಯಾಲಯದಲ್ಲಿ ಹೊಸ ಅರ್ಜಿ ಸಲ್ಲಿಸಲಾಗಿದೆ.
ಬುಧವಾರ ಸಲ್ಲಿಸಲಾದ ಅರ್ಜಿಯಲ್ಲಿ ಎಲ್ಲಾ ಇಸ್ಲಾಮಿಕ್ ಚಟುವಟಿಕೆಗಳು ಮತ್ತು ಪೂಜಾ ಸ್ಥಳಕ್ಕೆ ಸೂಕ್ತವಲ್ಲದ ಇತರ ಯಾವುದೇ ಆಚರಣೆಗಳನ್ನು ನಿಲ್ಲಿಸುವಂತೆ ಮನವಿಮಾಡಲಾಗಿದೆ. ಈ ವಿಷಯವು ಏಪ್ರಿಲ್ 9 ರಂದು ವಿಚಾರಣೆಗೆ ಬರಲಿದೆ. ವಕೀಲ ಅಜಯ್ ಪ್ರತಾಪ್ ಸಿಂಗ್ ಅವರು ಭಗವಾನ್ ಶ್ರೀ ತೇಜೋ ಮಹಾದೇವ್ ಅವರ ಪೋಷಕರಾಗಿ ಮತ್ತು ಯೋಗೇಶ್ವರ್ ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಘ ಟ್ರಸ್ಟ್ ಮತ್ತು ಕ್ಷತ್ರಿಯ ಶಕ್ತಿಪೀಠ ವಿಕಾಸ್ ಟ್ರಸ್ಟ್ ಅಧ್ಯಕ್ಷರಾಗಿ ದಾವೆ ಹೂಡಿದ್ದಾರೆ. ಈ ಕಟ್ಟಡವು ತಾಜ್ ಮಹಲ್ ಎಂದು ಗುರುತಿಸಲ್ಪಡುವ ಇತಿಹಾಸವನ್ನು ಹೊಂದಿದೆ ಎಂಬ ತನ್ನ ಹೇಳಿಕೆಯನ್ನು ಬೆಂಬಲಿಸಲು ಅರ್ಜಿದಾರರು ವಿವಿಧ ಐತಿಹಾಸಿಕ ಪುಸ್ತಕಗಳನ್ನು ಉಲ್ಲೇಖಿಸಿದ್ದಾರೆ.