ಬೆಂಗಳೂರು: ಬಿಜೆಪಿ ಹೈಕಮಾಂಡ್ ನಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ 7ನೇ ಪಟ್ಟಿ ಪ್ರಕಟಿಸಲಾಗಿದೆ. ಕಗ್ಗಂಟಾಗಿದ್ದಂತ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ.
ಈ ಕುರಿತಂತೆ ಬಿಜೆಪಿಯಿಂದ ಅಭ್ಯರ್ಥಿಗಳ 7ನೇ ಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಕಟಿತ ಪಟ್ಟಿಯಲ್ಲಿ ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರಕ್ಕೆ ನವನೀತ್ ರಾಣಾಗೆ ಟಿಕೆಟ್ ನೀಡಲಾಗಿದೆ. ಕರ್ನಾಟಕದ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗಿದೆ.
ಅಂದಹಾಗೇ ಕೇಂದ್ರ ಸಚಿವ ಎ ನಾರಾಯಣಸ್ವಾಮಿಗೆ ಈ ಬಾರಿಯ ಲೋಕಸಭಾ ಚುನಾವಣೆಯ ಟಿಕೆಟ್ ಮಿಸ್ ಆಗಿದೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಎ.ನಾರಾಯಣಸ್ವಾಮಿಗೆ ಶಾಕ್ ನೀಡಲಾಗಿದೆ.
ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರಕ್ಕೆ ನವನೀತ್ ರಾಣಾಗೆ ಟಿಕೆಟ್ ನೀಡಲಾಗಿದೆ. ಕರ್ನಾಟಕದ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಲಾಗಿದೆ.
ಆಂಧ್ರಪ್ರದೇಶದ ಇಟ್ ಚೆರ್ಲಾ ಕ್ಷೇತ್ರಕ್ಕೆ ಎನ್ ಈಶ್ವರ್ ರಾವ್, ವಿಶಾಕಪಟ್ನಂ ನಾರ್ಥ್ ಗೆ ಪಿ ವಿಷ್ಣು ಕುಮಾರ್ ರಾಜು, ಅರಕು ವ್ಯಾಲಿಗೆ ಪಂಗಿ ರಾಜಾರಾವ್, ಅನ್ನಪರ್ತಿಗೆ ಎಂ ಶಿವ ಕೃಷ್ಣಂ ರಾಜು, ಕೈಕಲೂರಿಗೆ ಕಾಮಿನೇನಿ ಶ್ರೀನಿವಾಸ ರಾವ್, ವಿಜಯವಾಡ ವೆಸ್ಟ್ ಗೆ ವೈ ಎಸ್ ಚೌಧರಿ, ಬದವೇಲ್ ಕ್ಷೇತ್ರಕ್ಕೆ ಬೊಜ್ಜ ರೋಷಣ್ಣ, ಜಮ್ಮಲಮಡು ಕ್ಷೇತ್ರಕ್ಕೆ ಸಿ ಆಧಿನಾರಾಯಣ ರೆಡ್ಡಿ, ಅದೋನಿಗೆ ಡಾ.ಪಿವಿ ಪಾರ್ಥಸಾರಥಿ ಹಾಗೂ ಧರ್ಮಾವರಂ ಕ್ಷೇತ್ರಕ್ಕೆ ವೈ ಸತ್ಯ ಕುಮಾರ್ ಗೆ ಲೋಕಸಭಾ ಟಿಕೆಟ್ ಹಂಚಿಕೆ ಮಾಡಲಾಗಿದೆ.
ಇನ್ನೂ ಹರಿಯಾಣದ ಕರ್ನಲ್ ಲೋಕಸಭಾ ಕ್ಷೇತ್ರಕ್ಕೆ ನಯಾಬ್ ಸಿಂಗ್ ಸೈನಾಗೆ ಬಿಜೆಪಿಯಿಂದ 7ನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ.