ನವದೆಹಲಿ: ಮದ್ಯ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಹೈಕೋರ್ಟ್ನಿಂದ ಪರಿಹಾರ ಸಿಕ್ಕಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಬಂಧನ ಮತ್ತು ಇಡಿ ಕಸ್ಟಡಿಯನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಕೇಜ್ರಿವಾಲ್ ಅವರ ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಕೇಜ್ರಿವಾಲ್ ವಾದವೇನು.?
ವಿಚಾರಣೆಯ ಸಮಯದಲ್ಲಿ, ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಕೇಜ್ರಿವಾಲ್ ಅವರನ್ನ ತಕ್ಷಣ ಬಿಡುಗಡೆ ಮಾಡಲು ಆದೇಶಿಸುವಂತೆ ದೆಹಲಿ ಹೈಕೋರ್ಟ್’ನ್ನ ಒತ್ತಾಯಿಸಿದರು. ಕೇಜ್ರಿವಾಲ್ ಅವರನ್ನ ಇಡಿ ಬಂಧಿಸಿರುವುದು ಚುನಾವಣೆಗೆ ಮುಂಚಿತವಾಗಿ ತಮ್ಮನ್ನು, ಎಎಪಿಯನ್ನ ರಾಜಕೀಯವಾಗಿ ಅಸಮರ್ಥಗೊಳಿಸುವ ಗುರಿಯನ್ನು ಹೊಂದಿದೆ ಎಂದು ಸಿಂಘ್ವಿ ಹೇಳಿದರು. ಕೇಜ್ರಿವಾಲ್ ಅವರನ್ನು ಬಂಧಿಸುವ ಅಗತ್ಯವಿಲ್ಲ. ‘ಅಸಹಕಾರ’ ಎಂಬ ಪದವನ್ನು ಇಡಿ ಹೆಚ್ಚು ದುರುಪಯೋಗಪಡಿಸಿಕೊಂಡಿದೆ ಎಂದು ಸಿಂಘ್ವಿ ಹೇಳಿದರು. ಜಾರಿ ನಿರ್ದೇಶನಾಲಯದ ಪರವಾಗಿ ಹಾಜರಾದ ಎಎಸ್ಜಿ ಎಸ್.ವಿ.ರಾಜು ಅವರು ಮಧ್ಯಂತರ ಪರಿಹಾರ ನೀಡುವ ವಿಷಯದ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಲು ದೆಹಲಿ ಹೈಕೋರ್ಟ್ನಿಂದ ಸಮಯ ಕೋರಿದರು.
‘ಭಾರತದ ಶೇ.83ರಷ್ಟು ಯುವಕರು ನಿರುದ್ಯೋಗಿಗಳು’ : ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ
BREAKING: ಬೆಂಗಳೂರಿನ ‘ರಾಮೇಶ್ವರಂ ಕೆಫೆ’ ಸ್ಪೋಟ ಕೇಸ್: ಭಟ್ಕಳದಲ್ಲಿ ಶಂಕಿತ ವ್ಯಕ್ತಿ ನಿವಾಸದ ಮೇಲೆ ‘NIA ದಾಳಿ’
BREAKING: ಬೆಂಗಳೂರಿನ ‘ರಾಮೇಶ್ವರಂ ಕೆಫೆ’ ಸ್ಪೋಟ ಕೇಸ್: ಭಟ್ಕಳದಲ್ಲಿ ಶಂಕಿತ ವ್ಯಕ್ತಿ ನಿವಾಸದ ಮೇಲೆ ‘NIA ದಾಳಿ’