ನವದೆಹಲಿ: ತಜ್ಞರ ಪ್ರಕಾರ, ರಿವರ್ಸ್ ಆಸ್ಮೋಸಿಸ್ (ಆರ್ಒ) ಫಿಲ್ಟರ್ ಮಾಡಿದ ನೀರು ಬಳಕೆಗೆ ಉತ್ತಮ ಆಯ್ಕೆಯಾಗಿದೆ ಎಂಬ ಪ್ರಚಲಿತ ನಂಬಿಕೆ ನಿಜವಲ್ಲ ಎನ್ನಲಾಗಿದೆ. ಹೌದು, ನಾಗ್ಪುರದ ಸಿಎಸ್ಐಆರ್-ನ್ಯಾಷನಲ್ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಪ್ರಧಾನ ವಿಜ್ಞಾನಿ ಡಾ.ಅತುಲ್ ವಿ ಮಾಲ್ಧುರೆ ಅವರು ಇತ್ತೀಚೆಗೆ ಜಲ ತಂತ್ರಜ್ಞಾನ ಮತ್ತು ನಿರ್ವಹಣೆ ಕುರಿತ ವೆಬಿನಾರ್ನಲ್ಲಿ, ನೀರಿನಿಂದ ಅಗತ್ಯ ಕರಗಿದ ಘನವಸ್ತುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.
ಎಂದು ಡಾ.ಮಾಲ್ಧುರೆ ಒತ್ತಿ ಅವರ ಪ್ರಕಾರ, ಸಂಸ್ಕರಿಸಿದ ನೀರಿನಲ್ಲಿ ಒಟ್ಟು ಕರಗಿದ ಘನವಸ್ತುಗಳ ಶಿಫಾರಸು ಮಾಡಿದ ಮಟ್ಟವನ್ನು ಅಗತ್ಯ ಖನಿಜಾಂಶವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಲೀಟರ್ಗೆ 200-250 ಮಿಲಿಗ್ರಾಂಗಳಷ್ಟು ಕಾಪಾಡಿಕೊಳ್ಳಬೇಕು ಎನ್ನಲಾಗಿದೆ.
ಇನ್ನೂ ಇದಕ್ಕೆ ಸಂಬಂಧಪಟ್ಟಂತೆ ಗ್ಯಾಸ್ಟ್ರೋಎಂಟರಾಲಜಿ ಮುಖ್ಯಸ್ಥ ಡಾ.ಅನಿಲ್ ಅರೋರಾ, ಅಗತ್ಯ ಖನಿಜಗಳನ್ನು ಉಳಿಸಿಕೊಳ್ಳಲು ಮತ್ತು ನೈಟ್ರೇಟ್ಗಳಂತಹ ಹಾನಿಕಾರಕ ಮಾಲಿನ್ಯಕಾರಕಗಳನ್ನು ತೊಡೆದುಹಾಕಲು ಸೋಸುವಿಕೆಯ ನಂತರ ಕುದಿಸಿದ ನೀರನ್ನು ಆಯ್ಕೆ ಮಾಡಲು ಸಲಹೆ ನೀಡಿದರು. ಜೆಕೊಸ್ಲೊವಾಕಿಯಾ ಮತ್ತು ಸ್ಲೋವಾಕಿಯಾದಿಂದ ಬಂದ ಉದಾಹರಣೆಗಳನ್ನು ಅವರು ಗಮನಸೆಳೆದರು, ಅಲ್ಲಿ ಆರ್ಒ ನೀರಿನ ಮೇಲೆ ದೀರ್ಘಕಾಲದ ಅವಲಂಬನೆಯು ಸ್ನಾಯು ಆಯಾಸ, ಸೆಳೆತ ಮತ್ತು ಖನಿಜ ಕೊರತೆಯಿಂದಾಗಿ ಸ್ಮರಣೆ ನಷ್ಟ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಯಿತು ಅಂತ ಹೇಳಿದ್ದಾರೆ.