ಕೆಎನ್ ಎನ್ ಡಿಜಿಟಲ್ ಡೆಸ್ಕ್ : ವಿದೇಶಗಳಲ್ಲಿ ಉದ್ಯೋಗ ಆಮಿಷವೊಡ್ಡುವ ನಕಲಿ ಏಜೆಂಟರುಗಳ ಹಾವಳಿ ರಾಜ್ಯದಲ್ಲಿ ಹೆಚ್ಚಾಗುತ್ತಿರುವುದು ವರದಿಯಾಗಿದೆ. ಭಾರತ ಸರ್ಕಾರದ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಎಚ್ಚರಿಕೆ ನೀಡಿದೆ.
ನಿರುದ್ಯೋಗಿ ಯುವಕ-ಯುವತಿಯರು ಅನಧಿಕೃತ ಕಂಪನಿಗಳು, ವ್ಯಕ್ತಿಗಳ ಹೆಸರಿನಲ್ಲಿ ಸಾರ್ವಜನಿಕರಿಗೆ ವಿದೇಶಗಳಲ್ಲಿ ಉದ್ಯೋಗಗಳ ಕೊಡಿಸುವ ಭರವಸೆಗೆ ಮೋಸ ಹೋಗದಂತೆ ಅಧಿಕೃತ ಕಂಪನಿಗಳ ಮಾಹಿತಿ ಹೊಂದಬೇಕೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ತಿಳಿಸಿದ್ದಾರೆ.
ಸಾಗರೋತ್ತರ ನೇಮಕಾತಿಗೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯದಲ್ಲಿ ನೊಂದಾಯಿತ ಏಜೆಂಟ್, ಕಂಪನಿಗಳ ಪಟ್ಟಿಯನ್ನು ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯಿಂದ ಮಾಹಿತಿಯನ್ನು ಪಡೆಯಬಹುದಾಗಿದೆ. ಅನಧಿಕೃತ ವ್ಯಕ್ತಿಗಳು, ಕಂಪನಿಗಳು ಆಮಿಷವೊಡ್ಡಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.