ಬೆಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಳವಾಗಿದ್ದು, ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ರಾಜ್ಯ ಸರ್ಕಾರ ಮಹತ್ವದ ಸೂಚನೆ ನೀಡಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಬಿಸಿಲಿನ ತಾಪ ಹೆಚ್ಚಾಗಿದೆ. ಈ ಸಮಯದಲ್ಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಸಹಜ. ಬಿಸಿಲಿನ ಶಾಖ ಹೆಚ್ಚಾಗಿರುವುದರಿಂದ ದೇಹದಲ್ಲಿ ನೀರನಾಂಶ ಕೊರತೆ ಮಾತ್ರವಲ್ಲ, ಉಪ್ಪಿನಾಂಶದ ಕೊರತೆಯೂ ಉಂಟಾಗುತ್ತದೆ. ಹಾಗಾಗಿ ಬೇಸಿಗೆಯಲ್ಲಿ ನಾವು ನೀರಿನಾಂಶವಿರುವ ಆಹಾರ, ಹಣ್ಣು, ತರಕಾರಿಗಳನ್ನು ಹೆಚ್ಚು ಸೇವಿಸಬೇಕು.
ಬಿಸಿಲ ಬೇಗೆಗೆ ದೇಹದ ಬಗೆಗಿರಲಿ ವಿಶೇಷ ಕಾಳಜಿ
ಆಯಾಸವಾದಾಗ ಮಾತ್ರವಲ್ಲ, ಆಗಾಗ ನೀರು ಕುಡಿಯುತ್ತಲೇ ಇರಿ.
ಲಿಂಬೆ ಜ್ಯೂಸ್, ಮಜ್ಜಿಗೆ, ಲಸ್ಸಿ, ಹಣ್ಣಿನ ರಸಗಳನ್ನು ಹೆಚ್ಚು ಕುಡಿಯಿರಿ.
ಪ್ರಯಾಣದ ಸಮಯದಲ್ಲಿ ನೀರಿನ ಬಾಟಲ್ಗಳನ್ನು ಬ್ಯಾಗ್ನಲ್ಲಿ ಇರಿಸಿಕೊಳ್ಳಿ.
ನೀರಿನಂಶವಿರುವ, ಕಲ್ಲಂಗಡಿ, ಕಿತ್ತಳೆ, ಮೂಸಂಬಿ, ದ್ರಾಕ್ಷಿ, ಅನಾನಸ್ ಹಣ್ಣುಗಳನ್ನು ಸೇವಿಸಿ