ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ 7ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಏಳನೇ ಪಟ್ಟಿಯಲ್ಲಿ ಕಾಂಗ್ರೆಸ್ ಛತ್ತೀಸ್ ಗಢದ ನಾಲ್ವರು ಮತ್ತು ತಮಿಳುನಾಡಿನ ಒಬ್ಬ ಅಭ್ಯರ್ಥಿಯ ಹೆಸರನ್ನ ಘೋಷಿಸಿದೆ.
ತಮಿಳುನಾಡಿನ ಮೈಲಾಡುತುರೈನಿಂದ ಕಾಂಗ್ರೆಸ್ ಆರ್ ಸುಧಾ ಅವರನ್ನು ಕಣಕ್ಕಿಳಿಸಿದೆ. ಛತ್ತೀಸ್ ಗಢದ ಸುರ್ಗುಜಾ ಕ್ಷೇತ್ರದಿಂದ ಶಶಿ ಸಿಂಗ್, ರಾಯ್ ಗಢದಿಂದ ಮೇನಕಾ ದೇವಿ ಸಿಂಗ್, ಬಿಲಾಸ್ಪುರದಿಂದ ದೇವೇಂದ್ರ ಸಿಂಗ್ ಯಾದವ್ ಮತ್ತು ಕಂಕೇರ್ ನಿಂದ ಬೀರೇಶ್ ಠಾಕೂರ್ ಅವರನ್ನ ಪಕ್ಷ ಕಣಕ್ಕಿಳಿಸಿದೆ.
ಛತ್ತೀಸ್ ಗಢ.!
ಸುರ್ಗುಜಾ (ಎಸ್ಟಿ) – ಶಶಿ ಸಿಂಗ್
ರಾಯಗಢ – ಎಸ್ಟಿ – ಡಾ.ಮೇನಕಾ ದೇವಿ ಸಿಂಗ್
ಬಿಲಾಸ್ಪುರ್ – ದೇವೇಂದರ್ ಸಿಂಗ್ ಯಾದವ್
ಕಂಕರ್ – ಎಸ್ಟಿ – ಬೀರೇಶ್ ಠಾಕೂರ್
ತಮಿಳುನಾಡು.!
ಮಯಿಲಾಡುತುರೈ – ಅಡ್ವಕೇಟ್ ಆರ್.ಸುಧಾ
Congress releases the seventh list of candidates for the upcoming Lok Sabha elections. pic.twitter.com/H2sas8pfSI
— ANI (@ANI) March 26, 2024
BREAKING : ಬಾಲ್ಟಿಮೋರ್ ಸೇತುವೆಗೆ ಡಿಕ್ಕಿ ಹೊಡೆದ ಹಡಗಿನಲ್ಲಿದ್ದ ಎಲ್ಲ 22 ಸಿಬ್ಬಂದಿ ಭಾರತೀಯರು : ಹಡಗು ಕಂಪನಿ
ಬೆಂಗಳೂರು : ‘BMTC’ ಬಸ್ ಅಲ್ಲಿ ಮಹಿಳೆಯ ಮೇಲೆ ಹಲ್ಲೆ ಪ್ರಕರಣ : ಪೊಲೀಸರ ವಿಚಾರಣೆ ವೇಳೆ ಕಂಡಕ್ಟರ್ ಹೇಳಿದ್ದೇನು?
ಮುನ್ನುಗ್ಗುತ್ತಿದೆ ಭಾರತ ; ಚಾಲ್ತಿ ಖಾತೆ ಕೊರತೆ ‘6.3 ಬಿಲಿಯನ್ ಡಾಲರ್’ಗೆ ಇಳಿಕೆ, ‘FDI’ ದ್ವಿಗುಣ