ರಾಮನಗರ: ನನಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಜನರು ಪರಿಚಯ ಇರದೇ ಇರಬಹುದು. ಆದ್ರೇ ನಾ ಮಾಡಿದಂತ ಸಾಮಾಜಿಕ, ಜನಪರ ಕೆಲಸದಿಂದ ನನ್ನ ಪರಿಚಯ ಜನರಿಗೆ ಇದೆ ಎಂಬುದಾಗಿ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಹೇಳಿದ್ದಾರೆ.
ನಗರದಲ್ಲಿ ಇಂದು ಡಿಸಿಎಂ ಸ್ವಕ್ಷೇತ್ರದ ಕನಕಪುರದಲ್ಲಿ ಬಿಜೆಪ-ಜೆಡಿಎಸ್ ಕಾರ್ಯಕರ್ತರ ಸಮ್ಮಿಲನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ‘ಜನಶಕ್ತಿಯ ಮುಂದೆ ಯಾವ ಶಕ್ತಿಯು ನಡೆಯುವುದಿಲ್ಲ’ ಎಂದು ಡಿ.ಕೆ. ಸಹೋದರರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಡಾ. ಮಂಜುನಾಥ್ ಅವರು, ‘ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಹೃದಯಗಳು ಒಂದಾಗಿವೆ. ಕನಕಪುರದಲ್ಲಿ ಒಂದೊಂದು ಮತವೂ ಸ್ವಾಭಿಮಾನದ ಮತವಾಗಿದ್ದು, ನಮಗೆ ಆನೆ ಬಲ ತಂದು ಕೊಡುತ್ತದೆ. ಟೀಕೆಗಳು ಸಾಯುತ್ತವೆ, ಸಾಧನೆಗಳು ಉಳಿಯುತ್ತವೆ. ಟೀಕೆಗಳಿಗೆ ಕಿವಿಗೊಡದೆ ಗೆಲುವಿಗಾಗಿ ಶ್ರಮಿಸಿ ಎಂದರು.
ಕನಕಪುರದಲ್ಲಿ ಸಮ್ಮಿಲನ ಸಭೆ ಆತ್ಮವಿಶ್ವಾಸ ಕೊಟ್ಟಿದೆ. ಉರಿ ಬಿಸಿಲಿನಲ್ಲಿ ಜನರು ಕಿಕ್ಕಿರಿದು ಜನರು ಬಂದಿದ್ದಾರೆ. ಹೀಗಾಗಿ ನಾನು ಗೆಲ್ಲುವುದು 100% ಖಚಿತವಾಗಿದೆ. ಕನಕಪುರದಲ್ಲಿ ಗಣನೀಯವಾಗಿ ಜಾಸ್ತಿ ಮತಗಳು ಬರುತ್ತವೆ. ಕಳೆದ ಬಾರಿಗಿಂತ ಈ ಬಾರಿ ಜೆಡಿಎಸ್ ಬಿಜೆಪಿ ಹೆಚ್ಚು ಮತಗಳನ್ನು ಗಳಿಸುತ್ತದೆ ಎಂದು ಹೇಳಿದರು.
ಕರ್ನಾಟಕಕ್ಕೆ ‘GST ಮೋಸ’ದ ಬಗ್ಗೆ ಚರ್ಚೆಗೆ ಸಿದ್ದವಿದ್ದಿರಾ?: ‘ನಿರ್ಮಲಾ’ಗೆ ‘ಸಚಿವ ಕೃಷ್ಣ ಬೈರೇಗೌಡ’ ಸವಾಲ್!
ಲಂಡನ್ ನಲ್ಲಿ ಕಸದ ಲಾರಿಗೆ ಸೈಕಲ್ ಡಿಕ್ಕಿ : ಭಾರತೀಯ ಮೂಲದ ‘PHD’ ವಿದ್ಯಾರ್ಥಿನಿ ಸಾವು