ಮೀರತ್ : ಯುಪಿಯ ಮೀರತ್’ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿ ವಾಸಿಸುತ್ತಿದ್ದ ಪತಿ, ಪತ್ನಿ ಹಾಗೂ ನಾಲ್ವರು ಮಕ್ಕಳಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಚಿಕಿತ್ಸೆ ವೇಳೆ ನಾಲ್ವರು ಮಕ್ಕಳು ಸಾವನ್ನಪ್ಪಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಇನ್ನು ಪತಿಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಸಂಜೆ ಪಲ್ಲವಪುರಂ ಪ್ರದೇಶದ ಮನೆಯೊಂದರಲ್ಲಿ ಮೊಬೈಲ್ ಜಾರ್ಜ್’ಗೆ ಹಾಕುವಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿ ನಂದಿಸಲಾಯಿತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್’ನಿಂದ ಬೆಂಕಿ ಅವಘಡ ಸಂಭವಿಸಿರುವುದು ಪತ್ತೆಯಾಗಿದ್ದು, ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
#UttarPradesh: Tragic accident in #Meerut. A house caught fire due to short circuit while charging a mobile. 3 children burnt to death, 3 in critical condition, admitted to #Delhi #AIIMS. pic.twitter.com/FaziyNaYWc
— Siraj Noorani (@sirajnoorani) March 24, 2024
‘ಸಚಿವರ ಕಪಾಳ’ಕ್ಕೆ ಜನತೆ ‘ಲೋಕಸಭಾ ಚುನಾವಣೆ’ಯಲ್ಲಿ ಬಾರಿಸುವುದು ಶತಸಿದ್ಧ – BJP
BREAKING : ಸುರಕ್ಷತಾ ಬಿಕ್ಕಟ್ಟಿನ ನಡುವೆ ಬೋಯಿಂಗ್ CEO ‘ಡೇವ್ ಕ್ಯಾಲ್ಹೌನ್’ ರಾಜೀನಾಮೆ