ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮಾರ್ಚ್ ವಿದ್ಯುತ್ ಬಿಲ್ಗಳಿಗೆ ಯಾವುದೇ ವಿಳಂಬ ದಂಡ ಶುಲ್ಕವನ್ನು ವಿಧಿಸುವುದಿಲ್ಲ ಎಂದು ಘೋಷಿಸಿದೆ.
ಧನ ಇಲಾಖೆಯ ಸಾಫ್ಟ್ ವೇರ್ ವ್ಯವಸ್ಥೆ ಉನ್ನತೀಕರಣ ಪ್ರಯುಕ್ತ ಸ್ಥಗಿತಗೊಂಡಿದ್ದ ವಿದ್ಯುತ್ ಸರಬರಾಜು ಕಂಪನಿಗಳ (ಬೆಸ್ಕಾಂ) ಆನ್ ಲೈನ್ ಬಿಲ್ ಪಾವತಿ ಸೇರಿ ವಿವಿಧ ಸೇವೆಗಳು ಪುನಾರಂಭಗೊಂಡಿವೆ.ಮಾರ್ಚ್ 10 ಮತ್ತು 19 ರ ನಡುವೆ ಬೆಸ್ಕಾಂಗೆ ಆನ್ ಲೈನ್ ವ್ಯವಸ್ಥೆಗೆ ತಾಂತ್ರಿಕ ನವೀಕರಣದ ನಂತರ ವಿದ್ಯುತ್ ಕಂಪನಿಯ ಈ ಕ್ರಮ ಬಂದಿದೆ. ಇದರಿಂದ ಉಂಟಾಗಿರುವ ಅನಾನುಕೂಲತೆಯನ್ನು ಮನಗಂಡಿರುವ ಬೆಸ್ಕಾಂ, ಮಾರ್ಚ್ ತಿಂಗಳ ವಿದ್ಯುತ್ ಬಿಲ್ ಮೇಲೆ ವಿಳಂಬ ಶುಲ್ಕ ವಿಧಿಸುವುದಿಲ್ಲ ಎಂದು ಘೋಷಿಸಿದೆ.
ಬೆಸ್ಕಾಂ ಅಡಿಯಲ್ಲಿ ಬರುವ ರಾಮನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಗ್ರಾಹಕರು ವಿದ್ಯುತ್ ಬಿಲ್ ಪಾವತಿ ವಿಳಂಬವಾದರೆ ವಿಳಂಬ ಪಾವತಿ ಶುಲ್ಕ ಪಾವತಿಸಬೇಕಾಗಿಲ್ಲ.