ಬೆಂಗಳೂರು: ಬಿಜೆಪಿ ಬಿಟ್ಟು ಬೇರೆ ಪಾರ್ಟ ಕಟ್ಟಿದ್ದ ಮಾಜಿ ಸಚಿವ ಜನಾರ್ಧಾನ ರೆಡ್ಡಿ ಇಂದು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಇಂದು ಬೆಂಗಳೂರಿನ ಬಿಜೆಪಿ ಪಾರ್ಟಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪಾರ್ಟಿ ಭಾವುಟ ನೀಡಿ ಬರಮಾಡಿಕೊಂಡರು.
ಈ ವೇಳೇ ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಸಿ. ಟಿ. ರವಿ, ಶ್ರೀ ಬಿ. ಶ್ರೀರಾಮುಲು, ಸಂಸದರಾದ ಪಿ. ಸಿ. ಮೋಹನ್ ಮತ್ತು ಪ್ರಮುಖರು ಹಾಜರಿದ್ದರು.