ನವದೆಹಲಿ : ಮಾರ್ಚ್ 25 ರ ಇಂದು ದೇಶಾದ್ಯಂತ ಹೋಳಿ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ನೂರು ವರ್ಷಗಳ ನಂತರ, ಹೋಳಿಯಲ್ಲಿ ಚಂದ್ರ ಗ್ರಹಣ ಸಂಭವಿಸಲಿದೆ. ಭಾರತದಲ್ಲಿ ಚಂದ್ರಗ್ರಹಣ ಗೋಚರಿಸದ ಕಾರಣ ಇದು ಯಾವುದೇ ಪರಿಣಾಮ ಬೀರುವುದಿಲ್ಲ.
2024 ರ ಮೊದಲ ಚಂದ್ರಗ್ರಹಣವು ಇಂದು ಸಂಭವಿಸಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇಂದು ಹೋಳಿ ಹಬ್ಬ ಬಂದಿರುವುದರಿಂದ ಅದರ ಮಹತ್ವವನ್ನು ಹೆಚ್ಚಿಸುತ್ತದೆ. ಗ್ರಹಣವು ಮಾರ್ಚ್ 25 ರಂದು ಬೆಳಗ್ಗೆ 10:24 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 3:01 ಕ್ಕೆ ಕೊನೆಗೊಳ್ಳಲಿದೆ.
ಅಮೆರಿಕ, ಜಪಾನ್, ರಷ್ಯಾ, ಐರ್ಲೆಂಡ್, ಇಂಗ್ಲೆಂಡ್, ಸ್ಪೇನ್, ಪೋರ್ಚುಗಲ್, ಇಟಲಿ, ಜರ್ಮನಿ, ಫ್ರಾನ್ಸ್, ಹಾಲೆಂಡ್, ಬೆಲ್ಜಿಯಂ, ದಕ್ಷಿಣ ನಾರ್ವೆ ಮತ್ತು ಸ್ವಿಟ್ಜರ್ಲೆಂಡ್ನಲ್ಲಿ ಈ ಚಂದ್ರಗ್ರಹಣ ಗೋಚರಿಸಲಿದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಈಗಾಗಲೇ ಹೇಳಿದಂತೆ, 2024 ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸಲಿವೆ. ಮೊದಲ ಚಂದ್ರಗ್ರಹಣ ಮಾರ್ಚ್ 25 ರ ಸೋಮವಾರ ಸಂಭವಿಸಲಿದೆ. ಎರಡನೇ ಚಂದ್ರಗ್ರಹಣ ಸೆಪ್ಟೆಂಬರ್ 18 ರ ಬುಧವಾರ ಸಂಭವಿಸಲಿದ್ದು, ಮೊದಲ ಸೂರ್ಯಗ್ರಹಣವು ಏಪ್ರಿಲ್ 8 ರ ಸೋಮವಾರ ಸಂಭವಿಸಲಿದ್ದು, ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 2 ರ ಬುಧವಾರ ಸಂಭವಿಸಲಿದೆ
ಗ್ರಹಣ ಸಮಯ
ಸ್ಪರ್ಶಕಾಲ: ಮುಂಜಾನೆ 10 ಗಂಟೆ 20 ನಿಮಿಷ
ಮಧ್ಯಕಾಲ: ಮಧ್ಯಾಹ್ನ 12 ಗಂಟೆ 42 ನಿಮಿಷ
ಮೋಕ್ಷ ಕಾಲ: ಮಧ್ಯಾಹ್ನ 3 ಗಂಟೆ 02 ನಿಮಿಷ
ಎಲ್ಲೆಲ್ಲಿ ಗೋಚರಿಸಲಿದೆ?
ಭಾರತವನ್ನು ಹೊರತುಪಡಿಸಿ ಯೂರೋಪ್, ಆಸ್ಟ್ರೇಲಿಯಾ, ಆಫ್ರಿಕಾ, ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಆರ್ಕಟಿಕ್ ಮತ್ತು ಅಂಟಾರ್ಟಿಕಾದಲ್ಲಿ ಗೋಚರಿಸುತ್ತದೆ. ರಷ್ಯಾ, ಜರ್ಮನಿ, ಜಪಾನ್, ಸ್ವಿಡ್ಜರ್ಲೆಂಡ್, ನೆದರ್ಲೆಂಡ್, ಐರ್ಲೆಂಡ್, ಬೆಲ್ಜಿಯಂ, ಸ್ಪೇನ್, ಇಂಗ್ಲೆಂಡ್, ದಕ್ಷಿಣ ನಾರ್ವೆ, ಇಟಲಿ, ಪೋರ್ಚುಗಲ್ ಸೇರಿದಂತೆ ಕೆಲವು ಭಾಗಗಳಲ್ಲಿ ಗ್ರಹಣ ಗೋಚರಿಸಲಿದೆ.