ದಾಂಪತ್ಯದಲ್ಲಿ ಅನ್ಯೋನ್ಯತೆಯು ಇದ್ದರೆ ಮಾತ್ರ ಅದು ಹೆಚ್ಚು ಕಾಲ ಬಾಳಿಕೆ ಬರಲು ಸಾಧ್ಯ. ಸಂಗಾತಿಗಳಿಬ್ಬರು ತಮ್ಮ ನಿತ್ಯ ಜೀವನದಲ್ಲಿ ಮಾಡುವಂತಹ ಕೆಲವೊಂದು ಚಟುವಟಿಕೆಗಳು ಹಾಗೂ ಕಾರ್ಯಗಳು ಅವರ ನಡುವಿನ ಭಾಂದವ್ಯವನ್ನು ಹೆಚ್ಚಿಸುವುದು.
ಆದರೆ ಇಂದಿನ ದಿನಗಳಲ್ಲಿ ಪತಿ ಹಾಗೂ ಪತ್ನಿ ಇಬ್ಬರು ಉದ್ಯೋಗಸ್ಥರಾಗಿರುವ ಕಾರಣದಿಂದಾಗಿ ಜತೆಯಾಗಿ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಲಿದೆ. ದಂಪತಿಯು ಈ ಚಟುವಟಿಕೆಗಳನ್ನು ಜತೆಯಾಗಿ ನಡೆಸಿದರೆ ಅದರಿಂದ ಅವರ ನಡುವೆ ಭಾಂದವ್ಯ ಹೆಚ್ಚಾಗುವುದು ಎಂದು ಹೇಳಲಾಗುತ್ತದೆ.
ಅಂತಹ ಕೆಲವು ಚಟುವಟಿಕೆಗಳ ಬಗ್ಗೆ ತಿಳಿಯಲು ನೀವು ಈ ಲೇಖನ ಓದಿ.
ದಂಪತಿಯು ತಮ್ಮ ಮಕ್ಕಳನ್ನು ಇಂತಹ ಜಾಗಗಳಿಗೆ ಕರೆದುಕೊಂಡು ಹೋಗುವುದು ಸಹಜ. ಆದರೆ ದಂಪತಿಗಳಿಬ್ಬರೇ ಇಲ್ಲಿಗೆ ಹೋದರೆ ಅವರ ನಡುವಿನ ಭಾಂದವ್ಯ ಹೆಚ್ಚಾಗುವುದು. ಇಂತಹ ಸ್ಥಳಗಳಿಗೆ ಭೇಟಿ ನೀಡಿದ ವೇಳೆ ನಾವು ಕೆಲವೊಂದು ಬಾಲ್ಯದ ವಿಚಾರಗಳನ್ನು ಹಂಚಿ ಕೊಳ್ಳುತ್ತೇವೆ. ಇದು ಇಬ್ಬರ ಮನಸ್ಸನ್ನು ಸರಿಯಾಗಿ ಅರಿಯಲು ಸಾಧ್ಯವಾಗಲಿದೆ.
ಕೆಲವರಿಗೆ ಸಂಗೀತದಲ್ಲಿ ಆಸಕ್ತಿ ಇದ್ದರೆ ಇನ್ನು ಕೆಲವರಿಗೆ ಇರದು. ಆದರೆ ದಂಪತಿಯಲ್ಲಿ ಒಬ್ಬರಿಗೆ ಇದರಲ್ಲಿ ಆಸಕ್ತಿ ಇದ್ದರೆ ಆಗ ಇಬ್ಬರು ಜತೆಯಾಗಿ ಹೋಗಿ ಇದನ್ನು ಕಲಿತುಕೊಂಡರೆ ಆಗ ಖಂಡಿತವಾಗಿಯೂ ಇದರಿಂದ ಭಾಂದವ್ಯವು ವೃದ್ಧಿಯಾಗುವುದು. ಸಂಗೀತವು ಎಲ್ಲ ಒತ್ತಡವನ್ನು ಕಡಿಮೆ ಮಾಡುವುದು ಹಾಗೂ ಸಂಬಂಧವನ್ನು ಬೆಸೆಯುವುದು. ನೀವು ಪ್ರೇಮ ವಿವಾಹವಾಗಿದ್ದರೆ ಆಗ ಖಂಡಿತವಾಗಿಯೂ ಪ್ರೇಮ ಪತ್ರ ಬರೆದಿರಬಹುದು. ಇಂದಿನ ದಿನಗಳಲ್ಲಿ ಎಲ್ಲವೂ ಅಂಗೈಯ ಮೇಲಿನ ಮೊಬೈಲ್ ನಲ್ಲೇ ಚಿಟಿಕೆ ಹೊಡೆಯುವುದರಲ್ಲಿ ಎಲ್ಲವನ್ನು ಬರೆಯಬಹುದು.
ಆದರೆ ನಿಜವಾಗಿಯೂ ಒಂದು ಪತ್ರದಲ್ಲಿ ಬರೆದಂತಹ ಭಾವನೆಗಳು ಇದರಲ್ಲಿ ಬರಲು ಸಾಧ್ಯವಾಗದು. ಹೀಗಾಗಿ ನೀವು ಸ್ವಲ್ಪ ವರ್ಷ ಹಿಂದಿನ ಶೈಲಿಯಲ್ಲಿ ಪ್ರೇಮ ಪತ್ರವನ್ನು ಬರೆದರೆ ಅದು ನಿಮ್ಮ ನಡುವಿನ ಪ್ರೀತಿ ಹೆಚ್ಚಿಸುವುದು.
ನಿಮಗಿಬ್ಬರಿಗೆ ತುಂಬಾ ಇಷ್ಟವಾಗಿರುವ ಜಾಗಕ್ಕೆ ನೀವಿಬ್ಬರು ಪಿಕ್ನಿಕ್ ಗೆ ಹೋಗಿ. ಅಲ್ಲಿ ನಿಮ್ಮಿಷ್ಟದ ಆಹಾರ, ಪಾನೀಯ ಇತ್ಯಾದಿಗಳನ್ನು ಕೊಂಡು ಹೋಗಿ. ಇಬ್ಬರು ಜತೆಯಾಗಿ ಕುಳಿತುಕೊಂಡು ಇದನ್ನು ಸವಿಯುತ್ತಲಿದ್ದರೆ ಆಗ ನಿಮ್ಮ ನಡುವಿನ ಭಾಂದವ್ಯವು ಬೆಸೆಯುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ತಿಂಗಳಲ್ಲಿ ಒಂದು ಸಲ ಹೀಗೆ ಮಾಡಿದರೂ ನೀವು ಮತ್ತಷ್ಟು ಹತ್ತಿರವಾಗುವಿರಿ.
ನೀವಿಬ್ಬರು ಇದುವರೆಗೆ ಬೇರೆ ರಾಜ್ಯ ಅಥವಾ ದೇಶಗಳಿಗೆ ಹೋಗದೆ ಇರಬಹುದು. ಅಲ್ಲಿಗೆ ನೀವು ಹೋಗಿ. ಕೆಲವೊಂದು ಟ್ರಕ್ಕಿಂಗ್ ಅಥವಾ ಇತರ ಗುಂಪಿನ ಜತೆಗೆ ಸೇರಿಕೊಂಡು ದೂರ ಪ್ರಯಾಣ ಮಾಡಿದರೆ ಅದು ನಿಮ್ಮಿಬ್ಬರ ನಡುವಿನ ಪ್ರೀತಿ ಹೆಚ್ಚಿಸುವುದು.
ಸಾಮಾನ್ಯವಾಗಿ ಪತ್ನಿ ಮಾಡಿದಂತಹ ಅಡುಗೆ ರುಚಿಯನ್ನು ಪತಿಯು ಯಾವಾಗಲೂ ಸವಿಯುತ್ತಿರುತ್ತಾನೆ. ಆದರೆ ಕೆಲವೊಮ್ಮೆ ಇಬ್ಬರು ಜತೆಯಾಗಿ ಅಡುಗೆ ಮಾಡಿದರೆ ಆಗ ಪರಸ್ಪರ ಬೆಸುಗೆಯು ಹೆಚ್ಚಾಗುವುದು.