ಚಿಕ್ಕಮಗಳೂರು: ನಾನು ಸಂಸದನಾಗಿ ಸಂಸತ್ ನಲ್ಲಿ ಕನ್ನಡಲ್ಲೇ ಪ್ರಮಾಣವಚನ ಸ್ವೀಕರಿಸುತ್ತೇನೆ. ಸಂಸದನಾದ 6 ತಿಂಗಳಲ್ಲೇ ಹಿಂದಿ ಕಲಿಯೋದಾಗಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಜಯಪ್ರಕಾಶ್ ಹೆಗ್ಡೆ ಅವರು ಹಿಂದಿ, ಇಂಗ್ಲೀಷ್ ಬರೋದಿಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದಂತ ಅವರು ಜಯಪ್ರಕಾಶ್ ಹೆಗಡೆಯವರು ನನ್ನ ಮೇಲಿನ ಪ್ರೀತಿ, ಅಭಿಮಾನದಿಂದ ಮುಂದೆ ಮುಜುಗರ ಆಗಬಾರದೆಂದು ಹಾಗೆ ಹೇಳಿದ್ದಾರೆ ಎಂದರು.
ನಾನು ಸಾಮಾನ್ಯ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದವನು. ಅಭಿಮಾನ, ಪ್ರೀತಿಯಿಂದ ಮುಂದೆ ಮುಜುಗರ ಆಬಾರದೆಂಬ ಕಾರಣಕ್ಕೆ ಹಾಗೆ ಹೇಳಿದ್ದಾರೆ. ನಾನು ಸಂಸತ್ ನಲ್ಲಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಸಂಸತ್ ಪ್ರವೇಶಿಸಿದ 6 ತಿಂಗಳಲ್ಲೇ ಹಿಂದಿ ಕಲಿಯುತ್ತೇನೆ ಎಂದರು.
ನಾನು ಜಯಪ್ರಕಾಶ್ ಹೆಗಡೆ ಅವರಿಗೆ ಸಮಾಧಾನ ಆಗುವಂತೆ ಹಿಂದಿಯಲ್ಲೇ ಭಾಷಣ ಮಾಡೇ ಮಾಡುತ್ತೇನೆ. ಅವರು ಕಾದು ನೋಡುವಂತೆ ಹಿಂದಿ ಮಾತನಾಡುವೆ ಎಂದು ಹೇಳಿದರು.
ಕೇವಲ ಎರಡು ಎಸೆತಗಳ ನಂತ್ರ ‘RR vs LSG’ ಪಂದ್ಯ ಕ್ಷಣಕಾಲ ನಿಲುಗಡೆ: ಕಾರಣ ಏನು ಗೊತ್ತಾ?
ಲೋಕಸಭಾ ಚುನಾವಣೆ: ಈವರೆಗೆ ರಾಜ್ಯದಲ್ಲಿ ‘ಎಷ್ಟು ಹಣ, ಮದ್ಯ, ವಸ್ತು ಸೀಜ್’ ಗೊತ್ತಾ? ಇಲ್ಲಿದೆ ಡೀಟೆಲ್ಸ್