ಬೆಂಗಳೂರು: ಅಂತೂ ಇಂತೂ ಬಿಜೆಪಿಯೊಂದಿಗೆ ಕೆ ಆರ್ ಪಿ ಪಿ ಪಕ್ಷ ವಿಲೀನಕ್ಕೆ ಸರ್ವಸಮ್ಮತದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಅಲ್ಲದೇ ಪದಾಧಿಕಾರಿಗಳು, ಬೆಂಬಗಲಿರೊಂದಿಗೆ ಬಿಜೆಪಿ ಪಕ್ಷವನ್ನು ಶಾಸಕ ಜನಾರ್ಧನ ರೆಡ್ಡಿ ನಾಳೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ.
ಇಂದು ಈ ಸಂಬಂಧ ತಮ್ಮ ನಿವಾಸದಲ್ಲಿ ಸಭೆ ನಡೆಸಿದಂತ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಶಾಸಕ ಜನಾರ್ಧನರೆಡ್ಡಿ ಅವರು, ಬಿಜೆಪಿ ಪಕ್ಷದೊಂದಿಗೆ ಕೆ ಆರ್ ಪಿ ಪಿ ಪಕ್ಷ ವಿಲೀನಕ್ಕೆ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಹೀಗಾಗಿ ನಾಳೆ ಬಿಜೆಪಿ ಪಕ್ಷದೊಂದಿಗೆ ಕೆ ಆರ್ ಪಿಪಿ ಪಕ್ಷವನ್ನು ವೀಲನಗೊಳಿಸೋದಾಗಿ ತಿಳಿಸಿದರು.
ನಾಳೆ ಪಕ್ಷವನ್ನು ಬಿಜೆಪಿಜೊತೆಗೆ ವಿಲೀನಗೊಳಿಸೋದರ ಜೊತೆಗೆ, ಪದಾಧಿಕಾರಿಗಳು, ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ತಾವು ಸೇರ್ಪಡೆಯಾಗಲಿದ್ದೇನೆ. ಬೆಳಿಗ್ಗೆ 10 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರ್ಪಡೆಗೊಳ್ಳುತ್ತಿರೋದಾಗಿ ತಿಳಿಸಿದರು.
ಲೋಕಸಭಾ ಚುನಾವಣೆ: ಈವರೆಗೆ ರಾಜ್ಯದಲ್ಲಿ ‘ಎಷ್ಟು ಹಣ, ಮದ್ಯ, ವಸ್ತು ಸೀಜ್’ ಗೊತ್ತಾ? ಇಲ್ಲಿದೆ ಡೀಟೆಲ್ಸ್