ರಾಯಚೂರು: ಕಾನು ಬಾಹಿರವಾಗಿ ಮಗುವನ್ನು ದತ್ತು ಪಡೆದಂತ ಪ್ರಕರಣದಲ್ಲಿ ಬಿಗ್ ಬಾಸ್ ಕನ್ನಡ ಖ್ಯಾತಿಯ ಸೋನು ಶ್ರೀನಿವಾಸಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಬಳಿಕ ವಶಕ್ಕೆ ಪಡೆದಿರುವಂತ ಅವರು, ಸ್ಥಳ ಮಹಜರ್ ನಡೆಸುತ್ತಿದ್ದಾರೆ.
ಇಂದು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕಾಚಾಪುರಕ್ಕೆ ರೀಲ್ಸ್ ಖ್ಯಾತಿಯ ಸೋನುಗೌಡ ಅವರು ಕರೆದೊಯ್ದಿದ್ದಾರೆ. ಅಲ್ಲಿ ಬಾಲಕಿ ಚಿಕ್ಕಪ್ಪ ಮನೆಗೆ ಬೇಟಿ ನೀಡಿದ್ದು, ಮಗು ದತ್ತು ಪಡೆದ ಬಗ್ಗೆ ಸ್ಥಳ ಮಹಜರು ನಡೆಸಿ, ಮಾಹಿತಿ ಪಡೆದಿದ್ದಾರೆ.
ಸ್ಥಳ ಮಹಜರು ವೇಳೆಯಲ್ಲಿ ಕಾಚಾಪುರ ಗ್ರಾಮಸ್ಥರು ಕಾನೂನು ಬಾಹಿರವಾಗಿ ಮಗುವನ್ನು ದತ್ತುಪಡೆದಂತ ಸೋನು ಗೌಡ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೇ ಅವರು ಆಗಮಿಸಿದ್ದಂತ ಕಾರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ, ಗಲಾಟೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ : ನವೋದಯ ವಿದ್ಯಾಲಯದಲ್ಲಿ 1377 ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನ
ದೇಶದ ಇತಿಹಾಸದಲ್ಲೇ ಇದೇ ಮೊದಲು: ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇರಳ!