ನವದೆಹಲಿ: ಮುಖರ್ಜಿ ನಗರದಲ್ಲಿ ಶುಕ್ರವಾರ ಹಾಡಹಗಲೇ ಮಹಿಳೆಗೆ ಚಾಕುವಿನಿಂದ ಇರಿದ ಆರೋಪದ ಮೇಲೆ ಅಮನ್ ಎಂಬ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವೀಕ್ಷಕರನ್ನು ಬೆಚ್ಚಿಬೀಳಿಸಿದೆ.
ಹತ್ತಿರದ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿರುವ ಪ್ರದೇಶದ ನಿವಾಸಿ ಅಮನ್, ಮಹಿಳೆಯ ಮೇಲೆ ಹಲ್ಲೆ ನಡೆಸಿದಾಗ ಕೋಪದಿಂದ ಪ್ರೇರಿತನಾಗಿದ್ದೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಆತ ಹೇಳುವ ಪ್ರಕಾರ, ಆಕೆ ತನನ್ನು ‘ಹುಚ್ಚ’ ಎಂದು ಪದೇ ಪದೇ ಕರೆಯುತ್ತಿದ್ದಳು. ಈ ಪ್ರಚೋದನೆಯು ಅವನನ್ನು ಹೊಡೆಯಲು ಕಾರಣವಾಯಿತು, ಹತ್ತಿರದ ಮಾರಾಟಗಾರನಿಂದ ಚಾಕುವನ್ನು ಕಸಿದುಕೊಂಡು ಮಹಿಳೆಯ ಮೇಲೆ ಹಲ್ಲೆ ಮಾಡಿರುವೆ ಅಂತ ತಿಳಿಸಿದ್ದಾನೆ ಎನ್ನಲಾಗಿದೆ.
ಸಂತ್ರಸ್ತೆಗೆ ಸಣ್ಣಪುಟ್ಟ ಗಾಯಗಳಾಗಿವೆ : ಅದೃಷ್ಟವಶಾತ್, ದಾರಿಹೋಕರ ತ್ವರಿತ ಮಧ್ಯಪ್ರವೇಶವು ಸಂತ್ರಸ್ತೆಗೆ ತೀವ್ರ ಹಾನಿಯನ್ನು ತಪ್ಪಿಸಿದೆ ಎನ್ನಲಾಗಿದೆ. ಆಕೆ ಸಣ್ಣ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಮನ್ ಮಹಿಳೆಯ ಕಡೆಗೆ ಧಾವಿಸಿ, ಅವಳನ್ನು ನೆಲಕ್ಕೆ ಬಡಿಯುವುದು ಮತ್ತು ಪ್ರೇಕ್ಷಕರು ಮಧ್ಯಪ್ರವೇಶಿಸುವ ಮೊದಲು ಪದೇ ಪದೇ ಚಾಕುವಿನಿಂದ ಇರಿದಿರುವುದನ್ನು ನೋಡಬಹುದಾಗಿದೆ. ಸಂತ್ರಸ್ತೆ ಜಫ್ರಾಬಾದ್ ನಿವಾಸಿಯಾಗಿದ್ದು, ಅಧ್ಯಯನಕ್ಕಾಗಿ ಹತ್ತಿರದ ಗ್ರಂಥಾಲಯಕ್ಕೆ ಆಗಾಗ್ಗೆ ಹೋಗುತ್ತಿದ್ದಳು ಎನ್ನಲಾಗಿದೆ.
#WATCH | Delhi: A 22-year-old man Aman has been arrested for attacking a girl in the Mukherjee Nagar area with a knife in broad daylight. The incident occurred on 22 March.
The passers-by intervened and tried to stop and catch the accused. The girl did not suffer grievous… pic.twitter.com/y5M4U4girT
— ANI (@ANI) March 24, 2024