ಬೆಂಗಳೂರು: ಬಿಜೆಪಿಯವರಿಗೆ ಇಪ್ಪತ್ತು ಸೀಟನ್ನು ಗೆಲ್ಲಿಸಿ ರಾಜ್ಯದಲ್ಲಿ ದೊಡ್ಡ ಸಂದೇಶವನ್ನು ನಾವು ಕಳುಹಿಸಬೇಕಿದೆ. ಅದನ್ನು ಮಾಡುವಂತಹ ಶಕ್ತಿ ನಮ್ಮ ಗ್ಯಾರಂಟಿಗಳ ಮೂಲಕ ಬಂದಿದೆ ಅಂತ ಡಿಸಿಎಂ ಶಿವಕುಮಾರ್ ಅವರು ಯಡವಟ್ಟಿನ ಮಾತು ಹೇಳಿರುವ ಘಟನೆ ನಡೆದಿದೆ.
ಹೌದು, ಅವರು ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಮಾತನಾಡಿದರು, ಇದೇ ವೇಳೆ ಅವರು ಮಾತನಾಡಿ, ಗ್ಯಾರಂಟಿಗಳ ಬಗ್ಗೆ ಅರಿವು ಮೂಡಿಸಲು ನಮ್ಮ ಕಾರ್ಯಕರ್ತರು ಪ್ರತೀ ಮತದಾರರ ಮನೆಗೆ ಹೋಗಿ ನಮ್ಮ ಸರ್ಕಾರದ ಕಾರ್ಯಗಳನ್ನು ಜನತೆಗೆ ತಿಳಿಸಬೇಕು. ಬಿಜೆಪಿಯವರಿಗೆ ಇಪ್ಪತ್ತು ಸೀಟನ್ನು ಗೆಲ್ಲಿಸಿ ರಾಜ್ಯದಲ್ಲಿ ದೊಡ್ಡ ಸಂದೇಶವನ್ನು ನಾವು ಕಳುಹಿಸಬೇಕಿದೆ ಅಂಥ ಹೇಳುವ ಮೂಲಕ ನರೆದಿದ್ದವರ ಹುಬ್ಬೇರಿಸುವಂತೆ ಮಾಡಿದರು.