ಗುವಾಹಟಿ: ಐಸಿಸ್ಗೆ ನಿಷ್ಠೆ ತೋರಿದ ಆರೋಪದ ಮೇಲೆ ಐಐಟಿ-ಗುವಾಹಟಿ ವಿದ್ಯಾರ್ಥಿಯನ್ನು ಅಸ್ಸಾಂನ ಹಜೋದಲ್ಲಿ ಶನಿವಾರ ಬಂಧಿಸಲಾಗಿದೆ. ನಾಲ್ಕನೇ ವರ್ಷದ ಬಯೋಟೆಕ್ನಾಲಜಿ ವಿದ್ಯಾರ್ಥಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಮತ್ತು ಇಮೇಲ್ಗಳಲ್ಲಿ ತಾನು ಭಯೋತ್ಪಾದಕ ಸಂಘಟನೆಗೆ ಸೇರಲು ಉದ್ದೇಶಿಸಿದ್ದೇನೆ ಮತ್ತು ಐಐಟಿ-ಗುವಾಹಟಿ ಕ್ಯಾಂಪಸ್ನಿಂದ ಕಾಣೆಯಾಗಿದ್ದೇನೆ ಎಂದು ಹೇಳಿಕೊಂಡಿದ್ದ ಈತ.
ಬಾಂಗ್ಲಾದೇಶದಿಂದ ಗಡಿ ದಾಟಿದ ಆರೋಪದ ಮೇಲೆ ಐಸಿಸ್ ಇಂಡಿಯಾ ಮುಖ್ಯಸ್ಥ ಹ್ಯಾರಿಸ್ ಫಾರೂಕಿಯನ್ನು ಧುಬ್ರಿ ಜಿಲ್ಲೆಯಲ್ಲಿ ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ದೆಹಲಿ ನಿವಾಸಿಯಾಗಿರುವ ವಿದ್ಯಾರ್ಥಿಯು ಲಿಂಕ್ಡ್ಇನ್ನಲ್ಲಿ ತನ್ನ ನಿರ್ಧಾರದ ಕಾರಣವನ್ನು ವಿವರಿಸಿ ಬಹಿರಂಗ ಪತ್ರ ಬರೆದ ನಂತರ ಲುಕ್ಔಟ್ ಅಲರ್ಟ್ ಹೊರಡಿಸಲಾಗಿದೆ. ಗುವಾಹಟಿಯಿಂದ 30 ಕಿ.ಮೀ ದೂರದಲ್ಲಿರುವ ಕಾಮರೂಪ್ ಜಿಲ್ಲೆಯ ಹಜೋದಲ್ಲಿ ಆತನನ್ನು ಪತ್ತೆ ಹಚ್ಚಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.