ಚಿತ್ರದುರ್ಗ : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
ಬಿ.ವೈ ರಾಘವೇಂದ್ರ ಅವರು ಚಿತ್ರದುರ್ಗ ಬಳಿಯ ಬೋವಿ ಮಠಕ್ಕೆ ಭೇಟಿ ನಿಡಿ ರಾಜಕೀಯ ಭಾಷಣ ಮಾಡಿರುವ ಆರೋಪ ಕೇಳಿ ಬಂದಿದ್ದು, ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ. ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ವೈ. ರಾಘವೇಂದ್ರ ಅವರು ನಿನ್ನೆ ಚಿತ್ರದುರ್ಗ ಬಳಿಯ ಬೋವಿ ಮಠಕ್ಕೆ ಭೇಟಿ ನೀಡಿ ವಿವಿಧ ಮಠಾಧೀಶರನ್ನು ಭೇಟಿಯಾಗಿದ್ದು, ಪೂರ್ವಾನುಮತಿ ಪಡೆಯದೇ ಸಭೆ, ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದೂರು ದಾಶಖಲಾಗಿದೆ.