CVIGIL ಎಂಬುದು ನಾಗರಿಕರಿಗೆ ಮಾದರಿ ನೀತಿ ಸಂಹಿತೆ ಮತ್ತು ಚುನಾವಣೆಯ ಸಮಯದಲ್ಲಿ ಉಲ್ಲಂಘನೆಯನ್ನು ವರದಿ ಮಾಡಲು ಒಂದು ನವೀನ ಮೊಬೈಲ್ ಅಪ್ಲಿಕೇಶನ್ ಆಗಿದೆ. ಸಿ-ವ್ಹಿಜಿಲ್ ಎಂದರೆ ವಿಜಿಲೆಂಟ್ ಸಿಟಿಜನ್ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಸಿ-ವ್ಹಿಜಿಲ್ ಎಂಬುದು ಚುನಾವಣೆಗಳಲ್ಲಿ ಪಾರದರ್ಶಕತೆ ಮತ್ತು ಮುಕ್ತತೆ ಕಾಪಾಡಲು ನಾಗರಿಕರು ವಹಿಸಬಹುದಾದ ಪೂರ್ವಭಾವಿ ಮತ್ತು ಜವಾಬ್ದಾರಿಯುತ ಪಾತ್ರವನ್ನು ಒತ್ತಿಹೇಳುತ್ತದೆ.
ಕ್ಯಾಮೆರಾ, ಉತ್ತಮ ಇಂಟರ್ನೆಟ ಸಂಪರ್ಕ ಮತ್ತು ಜಿಪಿಎಸ್ ಪ್ರವೇಶವನ್ನು ಹೊಂದಿರುವ ಯಾವುದೇ ಅಂಡ್ರಾಯ್ಡ್ (ಜೆಲ್ಲಿಬೀನ್ಮತ್ತುಮೇಲಿನ) ಜಿಎಪಿಎಸ್ ಸ್ಮಾರ್ಟ್ ಫೆÇೀನ್ಗಳಲ್ಲಿ ಅಪ್ಲಿಕೇಶನ್ ವನ್ನು ಈ ಫೆÇೀನ್ ದಲ್ಲಿ ಸ್ಥಾಪಿಸಬಹುದು ಮತ್ತು ಬಳಸಬಹುದು, ಒಅಅ ಅನ್ನು ಉಲ್ಲಂಘಿಸುವ ಚಟುವಟಿಕೆಯ ಚಿತ್ರ ಅಥವಾ 2 ನಿಮಿಷಗಳ ವೀಡಿಯೊವನ್ನು ಕ್ಲಿಕ್ ಮಾಡಿ ಮತ್ತು ದೂರನ್ನು ನೊಂದಾಯಿಸಬಹುದು.
ದೂರಿನೊಂದಿಗೆ ಸೆರೆಹಿಡಿಯಲಾದ ಜಿಎಪ್ ಮಾಹಿತಿಯು ಅದನ್ನು ಸಂಬಂಧಪಟ್ಟ ಜಿಲ್ಲಾ ನಿಯಂತ್ರಣ ಕೊಠಡಿಗೆ ಸ್ವಯಂಚಾಲಿತವಾಗಿ ಫ್ಲಾಗ್ ಮಾಡುತ್ತದೆ. ಫ್ಲೈಯಿಂಗ್ ಸ್ಕ್ಯಾಡ್ಗಳನ್ನು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ರವಾನಿಸಲು ಅನುವು ಮಾಡಿಕೊಡುತ್ತದೆ. ಸಿವಿಜಿಲ್ ಆ್ಯಪ್ ಮೂಲಕ ಜನರು ಯಾವುದೇ ರೀತಿಯ ಚುನಾವಣಾ ಅವ್ಯವಹಾರಗಳನ್ನು ವರದಿಮಾಡಬಹುದು. ಜನರು ನೀಡುವ ಪ್ರತಿ ದೂರಿಗೂ 100 ನಿಮಿಷಗಳ ಒಳಗೆ ಕ್ರಮ ಕೈಗೊಳ್ಳಲಾಗುವುದು. ಸಿವಿಜಿಲ್ ಆ್ಯಪ್ನಲ್ಲಿ ದೂರು ಕೊಡುವಾಗ ಜನರು ತಮ್ಮ ಹೆಸರನ್ನು ಬಹಿರಂಗಗೊಳಿಸಬಹುದು ಅಥವಾ ಅನಾಮಧೇಯವಾಗಿಯೂ ಇಡಬಹುದಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಕಂಟ್ರೋಲ್ ರೋಮ್ ಸ್ಥಾಪಿಸಿದ್ದು ಸಿ-ವ್ಹಿಜಿಲ್ ತಂಡ ಕಾರ್ಯಗತವಾಗಿದೆ. ಇಲ್ಲಿಯ (ಮಾ.23)ವರೆಗೆ ಧಾರವಾಡ ಜಿಲ್ಲೆಯ 629 ದೂರುಗಳು ಸಿ-ವ್ಹಿಜಿಲ್ ಮುಖಾಂತರ ದಾಖಲಾಗಿದ್ದು ನಿವಾರಣೆ ಮಾಡಲಾಗಿದೆ.
ಸಿ-ವ್ಹಿಜಿಲ್ ಕಾರ್ಯವನ್ನು ಕೆಆರ್.ಆರ್.ಡಿಎ ಧಾರವಾಡ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜನಿಯರ್ ಅನೀಸ್ ನಾಯಕ್ ಅವರು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳಾದ ರುದ್ರೇಶ ಮತ್ತು ಪ್ರಜ್ವಲ ಅವರ ತಾಂತ್ರಿಕ ಸಹಾಯದಲ್ಲಿ ನಿರ್ವಹಿಸಲಾಗುತ್ತಿದೆ.
ಸಿ-ವ್ಹಿಜಿಲ್ ಕಾರ್ಯವನ್ನು ಇಬ್ಬರು ಅಧಿಕಾರಿಗಳು, ಮೂರು ಶಿಪ್ಟ್ ದಲ್ಲಿ ಮಾಡುತ್ತಿದ್ದಾರೆ. ಈ ತಂಡದ ಸದಸ್ಯರಿಂದ ದಿನದ 24 ಗಂಟೆ ನಿರಂತರ ನಿಗಾವಹಿಸಿ, ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ನಿಯಮಗಳ ಉಲ್ಲಂಘಣೆ ಆಗದಂತೆ ಎಚ್ಚರವಹಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.