ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಆರೋಪಿಗಳ ಗುರುತು ಪತ್ತೆ ಹೆಚ್ಚಿದೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಹೋಗಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮುಸಾಬೀರ್ ಹುಸೇನ್ ತಾಜಿಬ್ ಎಂದು ಗುರುತಿಸಲಾಗಿದೆ. ಈ ಮೂಲಕ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ಕೃತ್ಯದ ಹಿಂದೆ ಐಸಿಸ್ ಮೆಡ್ಯುಲ್ ಕೈವಾಡ ಇರುವುದು ಖಚಿತವಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಎಐ ಮಹತ್ವದ ಸುಳಿವು ಪತ್ತೆಯಾಗಿದ್ದು, ಬಾಂಬರ್ ಜೊತೆಗೆ ಮತ್ತೊಬ್ಬ ಆರೋಪಿ ಇದ್ದು, ಇಬ್ಬರು ಕರ್ನಾಟಕದ ಮೂಲದವರು ಎಂದು ತಿಳಿದುಬಂದಿದೆ. ಮೊದಲಿಗೆ ಬಾಂಬರ್ ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಹೋಗಿದ್ದ. ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟಕ್ಕೂ ಮುನ್ನ ಎರಡು ತಿಂಗಳು ತಮಿಳುನಾಡಿನಲ್ಲಿ ವಾಸವಾಗಿದ್ದ ಇಬ್ಬರನ್ನು ಶಿವಮೊಗ್ಗ ಜಿಲ್ಲೆಯ ಮುಸಾವೀರ್, ಹುಸೇನ್ ಶಬೀದ್ ಎಂದು ಗುರುತಿಸಲಾಗಿದೆ ಎನ್ನಲಾಗಿದೆ.
ಇನ್ನು ಮಾರ್ಚ್ 1 ರಂದು ಕೆಫೆಗೆ ಬಾಮಬ್ ಇಡಲು ಬಂದಾಗ ಕ್ಯಾಪ್ ಧರಿಸಿದ್ದ ಶಂಕಿತ ವ್ಯಕ್ತಿ ಬಳಿಕ ಹೂಡಿ ಸಮೀಪದ ಮಸೀದಿಯಲ್ಲಿ ತಾನು ಧರಿಸಿದ್ದ ಶರ್ಟ್ ಹಾಗೂ ಕ್ಯಾಪ್ ಅನ್ನು ಬಿಸಾಕಿ ಪರಾರಿಯಾಗಿದ್ದ. ಮಸೀದಿಯಲ್ಲಿ ಸಿಕ್ಕ ಟೋಪಿ ಹಿಡಿದು ಶಂಕಿತನ ಬೆನ್ನತ್ತಿದ ರಾಷ್ಟ್ರೀಯ ತನಿಖಾ ದಳಕ್ಕೆ ಬಹುಮುಖ್ಯ ಸುಳಿವು ಲಭ್ಯವಾಗಿದ್ದು, ಚೆನ್ನೈನಲ್ಲಿ ಶಂಕಿತ ಉಗ್ರ ಕ್ಯಾಪ್ ಖರೀದಿಸಿದ್ದ ಅಂಗಡಿಯನ್ನು ಎನ್ ಐಎ ತಂಡ ಪತ್ತೆಹಚ್ಚಿದೆ.