ಬೆಂಗಳೂರು : ಲೊಕಸಭೆ ಚುನಾವಣೆ ಘೊಷಣೆ ಬಳಿಕ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ನಿನ್ನೆ ಒಂದೇ ದಿನ ಬರೋಬ್ಬರಿ 36ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಚುನಾವಣಾ ಅಕ್ರಮ ತಡೆಗೆ ಕಾರ್ಯನಿರ್ವಹಿಸುತ್ತಿರುವ ತನಿಖಾ ತಂಡಗಳು ರಾಜ್ಯಾದ್ಯಂತ ಶುಕ್ರವಾರ ಒಂದೇ 9.56 ಕೋಟಿ ರೂ. ನಗದು ಸೇರಿದಂತೆ 36.41 ಕೋಟಿ ರೂ. ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯಾದ್ಯಂತ ಶುಕ್ರವಾರ ಒಂದೇ 9 ಲಕ್ಷ ರೂ. ಮೌಲ್ಯದ ವಜ್ರವನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ 16.67 ಲಕ್ಷ ರೂ. ಉಚಿತ ಉಡುಗೊರೆ, 1.63 ಕೋಟಿ. ರೂ. ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.