ಮಂಡ್ಯ: ಲೋಕಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ, ಜನಪ್ರತಿನಿಧಿಗಳ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸದ ಕಾರಣ, ಲೋಕಸಭಾ ಚುನಾವಣೆಯ ಮತದಾನವನ್ನೇ ಮದ್ದೂರಿನ ಬಸವನಪುರ ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಬಸವನಪುರ ಗ್ರಾಮಕ್ಕೆ ಸಂಪರ್ಕ ರಸ್ತೆ ಇರಲಿಲ್ಲ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಮಂಡ್ಯದ ಗೆಜ್ಜಲಗೆರೆಯ ಮನ್ ಮುಲ್ ಡೈರಿ ಅದುರಿಗಿದ್ದರೂ, ತಮ್ಮ ಗ್ರಾಮಕ್ಕೆ 40 ವರ್ಷಗಳಿಂದ ಸಂಪರ್ಕ ರಸ್ತೆ ಕಲ್ಪಿಸದೇ ಇರೋದು ಬಸವನಪುರ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ 700 ಮತಗಳಿರುವಂತ ಬಸವನಪುರ ಗ್ರಾಮದ ಗ್ರಾಮಸ್ಥರು ಲೋಕಸಭಾ ಚುನಾವಣೆ ವೇಳೆಯಲ್ಲಿ ಮತದಾನ ಮಾಡೋದಕ್ಕೆ ನಿರಾಕರಿಸಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ಬಂಧನವನ್ನು ಪ್ರಶ್ನಿಸಿ ‘BSR ನಾಯಕಿ ಕವಿತಾ’ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ‘ಸುಪ್ರೀಂ ಕೋರ್ಟ್’