ನವದೆಹಲಿ: ಝೊಮಾಟೊ ಸಿಇಒ ದೀಪಿಂದರ್ ಗೋಯಲ್ ಅವರು ಉದ್ಯಮಿ ಗ್ರೇಸಿಯಾ ಮುನೋಜ್ ಅವರನ್ನು ವಿವಾಹವಾಗಿದ್ದಾರೆ. ಅವರ ವಿವಾಹವು ಒಂದು ತಿಂಗಳ ಹಿಂದೆ ನಡೆಯಿತು ಮೂಲಗಳು ತಿಳಿಸಿವೆ.
ಮೆಕ್ಸಿಕೊದಲ್ಲಿ ಜನಿಸಿದ ಮುನೋಜ್ ಮಾಜಿ ರೂಪದರ್ಶಿಯಾಗಿದ್ದು, ಈಗ ಐಷಾರಾಮಿ ಗ್ರಾಹಕ ಉತ್ಪನ್ನಗಳೊಂದಿಗೆ ವ್ಯವಹರಿಸುವ ತನ್ನದೇ ಆದ ಸ್ಟಾರ್ಟ್ಅಪ್ನಲ್ಲಿ ಕೆಲಸ ಮಾಡುತ್ತಿದ್ದಾರೆ.
ದೀಪಿಂದರ್ ಗೋಯಲ್ ಮತ್ತು ಗ್ರೇಸಿಯಾ ಮುನೋಜ್ ಫೆಬ್ರವರಿಯಲ್ಲಿ ಮಧುಚಂದ್ರದಿಂದ ಮರಳಿದ್ದಾರೆ ಎಂದು ವರದಿಯಾಗಿದೆ. ತನ್ನ ಇನ್ಸ್ಟಾಗ್ರಾಮ್ ಬಯೋದಲ್ಲಿ, ಮುನೋಜ್ ತಾನು ಮೆಕ್ಸಿಕೊದಲ್ಲಿ ಜನಿಸಿದ್ದೇನೆ ಮತ್ತು “ಈಗ ಭಾರತದ ಮನೆಯಲ್ಲಿ ವಾಸವಾಗಿದ್ದೇನೆ” ಎಂದು ಹೇಳುತ್ತಾರೆ.
ಗೋಯಲ್ ಅವರಿಗೆ ಇದು ಎರಡನೇ ಮದುವೆ. ಅವರು ಈ ಹಿಂದೆ ಐಐಟಿ-ದೆಹಲಿಯಲ್ಲಿ ಅಧ್ಯಯನ ಮಾಡುವಾಗ ಭೇಟಿಯಾದ ಕಾಂಚನ್ ಜೋಶಿ ಅವರನ್ನು ವಿವಾಹವಾದರು.