ಬೆಂಗಳೂರು: ತನ್ನ ಹಸಿ ಬಿಸಿ ದೃಶ್ಯಗಳಿಂದಲೇ ಸುದ್ದಿಯಾಗಿದ್ದ ಸೋನುಗೌಡಳನ್ನು ಪೊಲೀಸರು ಬಂಧಿಸಿದ್ದಾರೆ. ಮಗುವೊಂದನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ ಆಕೆಯನ್ನು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಕೆಲವು ಹಲವು ದಿನಗಳಿಂದ ತನ್ನ ಸಾಮಾಜಿಕ ಜಾಲತಾಣದಲ್ಲಿ ಸೋನುಗೌಡ ಹೆಣ್ಣುಮಗುವೊಂದರ ಜೊತೆಗೆ ಲೈವ್ನಲ್ಲಿ ಕಾಣಿಸಿಕೊಂಡು ತರವಾರಿ ಹೇಳಿಕೆಗಳನ್ನು ನೀಡುತ್ತಿದ್ದಳು, ಇದಾದ ಬಳಿಕ ಅಧಿಕಾರಿಗಳು ಈ ವಿಡಿಯೋಗಳನ್ನು ಗಮನಿಸಿ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗ ಸದ್ಯ ಸೋನುಗೌಡನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಸೋನುಗೌಡ ಈ ಹಿಂದೆ ಹಲವು ಕಾರಣಗಳಿಗೆ ಸುದ್ದಿಯಾಗಿದ್ದಳು, ಅದು ಬರಿ ವಿವಾದತ್ಮಕ ನಡೆಗಳಿಗೆ ಕೆಲವು ಮಾಧ್ಯಮಗಳು ಈಕೆಯನ್ನು ರೋಲ್ ಮಾಡೆಲ್ ಎನ್ನುವಂತೆ ಸುದ್ದಿಯನ್ನು ಮಾಡಿ ಆಕೆಯನ್ನು ಫೇಮಸ್ ಮಾಡಲು ಮುಂದಾಗಿದ್ದವು ಕೂಡ.