ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೂತಾನ್ ಪ್ರವಾಸಕ್ಕಾಗಿ ಶುಕ್ರವಾರ ಭೂತಾನ್ ಗೆ ತೆರಳಿದರು. ಅವರು ಶನಿವಾರ ಮರಳಲಿದ್ದಾರೆ.
ಈ ಭೇಟಿಯು ಭಾರತ ಸರ್ಕಾರವು ತನ್ನ ‘ನೆರೆಹೊರೆಯವರಿಗೆ ಮೊದಲು ನೀತಿ’ಗೆ ಒತ್ತು ನೀಡುವ ಭಾಗವಾಗಿದೆ.
ಅವರು ಈ ಹಿಂದೆ ಗುರುವಾರ ಹೊರಡಲು ನಿರ್ಧರಿಸಿದ್ದರು.ಆದರೆ ಹಿಮಾಲಯನ್ ರಾಷ್ಟ್ರ ಭೂತಾನ್ ನಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಭೇಟಿಯನ್ನು ಮುಂದೂಡಲಾಯಿತು.
ಭಾರತ-ಭೂತಾನ್ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಾಗಿ ಮೋದಿ ಎಕ್ಸ್ ನಲ್ಲಿ ಹೇಳಿದ್ದಾರೆ.
“ಭೂತಾನ್ ದೊರೆ, ಘನತೆವೆತ್ತ ನಾಲ್ಕನೇ ಡ್ರುಕ್ ಗ್ಯಾಲ್ಪೊ ಮತ್ತು ಪ್ರಧಾನಿ @tsheringtobgay ಅವರೊಂದಿಗೆ ಮಾತುಕತೆ ನಡೆಸಲು ನಾನು ಎದುರು ನೋಡುತ್ತಿದ್ದೇನೆ” ಎಂದು ಅವರು ಹೇಳಿದರು