ನವದೆಹಲಿ : ದೇಶದಲ್ಲಿ ಡಿಜಿಟಲ್ ಕ್ರಾಂತಿಯ ನಂತರ, ಯುಪಿಐ ವಹಿವಾಟಿನ ಪ್ರವೃತ್ತಿ ವೇಗವಾಗಿ ಹೆಚ್ಚಾಗಿದೆ. ಫೆಬ್ರವರಿ 2024 ರಲ್ಲಿ, ದೇಶದಲ್ಲಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ 18.2 ಲಕ್ಷ ಕೋಟಿ ರೂ.ಗಳ ವಹಿವಾಟು ನಡೆದಿದೆ.
ಈ ವಹಿವಾಟು ಜನವರಿ 2024 ಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆಯಾಗಿದೆ. ಜನವರಿಯಲ್ಲಿ 18.4 ಲಕ್ಷ ಕೋಟಿ ಮೌಲ್ಯದ 121 ಕೋಟಿ ವಹಿವಾಟುಗಳು ನಡೆದಿವೆ. ದೇಶದಲ್ಲಿ ಪ್ರತಿದಿನ ಸರಾಸರಿ 40 ಸಾವಿರ ಕೋಟಿಯಿಂದ 80 ಸಾವಿರ ಕೋಟಿ ರೂ.ಗಳ ಯುಪಿಐ ವಹಿವಾಟು ನಡೆಯುತ್ತದೆ ಎಂದು ಎನ್ಪಿಸಿಐ ತಿಳಿಸಿದೆ.
ಆನ್ಲೈನ್ ಪಾವತಿಯ ಇತರ ಎರಡು ವಿಧಾನಗಳಾದ ಎನ್ಇಎಫ್ಟಿ ಮತ್ತು ಆರ್ಟಿಜಿಎಸ್ ಮೂಲಕವೂ ಆನ್ಲೈನ್ ಪಾವತಿಗಳನ್ನು ಮಾಡಲಾಗಿದೆ ಎಂದು ಈ ಅಂಕಿಅಂಶಗಳು ತೋರಿಸುತ್ತವೆ. ಇದರಲ್ಲಿ ಎನ್ಇಎಫ್ಟಿಯಲ್ಲಿ ಸರಾಸರಿ ವಹಿವಾಟು 33.85 ಲಕ್ಷ ಕೋಟಿ ರೂ ಮತ್ತು ಆರ್ಟಿಜಿಎಸ್ನಲ್ಲಿ 146 ಲಕ್ಷ ಕೋಟಿ ರೂ. ಇಂಟರ್ನೆಟ್ ಬ್ಯಾಂಕಿಂಗ್ 91.24 ಲಕ್ಷ ಕೋಟಿ ರೂ., ಮೊಬೈಲ್ ಬ್ಯಾಂಕಿಂಗ್ 28.16 ಲಕ್ಷ ಕೋಟಿ ರೂ.ಇದೆ ಎಂದು ತಿಳಿಸಿದೆ.