ಬೆಂಗಳೂರು: ನಗರದ ನಗರತ್ ಪೇಟೆಯಲ್ಲಿ ಹನುಮಾನ್ ಚಾಲೀಸ ಗಲಾಟೆ ಪ್ರಕರಣ ಸಂಬಂಧ ಕೋಮುದ್ವೇಷ ಹೆಚ್ಚಿಸಿ, ಗಲಭೆ ಎಬ್ಬಿಸಲು ಪ್ರಯತ್ನಿಸಿದ ಆರೋಪದ ಮೇಲೆ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಶಾಸಕ ಸುರೇಶ್ ಕುಮಾರ್ ವಿರುದ್ಧ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಈ ಕುರಿತಂತೆ ಇಂದು ಜಾಗೃತ ನಾಗರೀಕರು ಕರ್ನಾಟಕದಿಂದ ಚುನಾವಣಾ ಆಯುಕ್ತರಿಗೆ ದೂರು ನೀಡಲಾಗಿದೆ. ಅದರಲ್ಲಿ ದೇಶದ ಸಂವಿಧಾನವನ್ನು ಗೌರವಿಸುವ ಕರ್ನಾಟಕದ ಸಮಾನ ಮನಸ್ಕರನ್ನೊಳಗೊಂಡಿರುವ ಜಾಗೃತ ನಾಗರಿಕರು ಕರ್ನಾಟಕ ವೇದಿಕೆಯ ಮೂಲಕ ಈ ಪತ್ರವನ್ನು ತಮ್ಮಗೆ ಸಲ್ಲಿಸ ಬಯಸುತ್ತೇವೆ. ಮತ್ತು ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿದೆ.
ದಿನಾಂಕ 17-03-2024ರಂದು ಬೆಂಗಳೂರಿನ ನಗರ್ತಪೇಟೆ ಪ್ರದೇಶದಲ್ಲಿ ನಡೆಯಿತನ್ನಲಾದ ಒಂದು ಘಟನೆಯನ್ನಾಧರಿಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಹಾಲಿ ಸಂಸದರು ಮತ್ತು ಸಂಭಾವ್ಯ ಅಭ್ಯರ್ಥಿಯಾದ ತೇಜಸ್ವಿ ಸೂರ್ಯ ಕೇಂದ್ರದ ಸಚಿವರಾದ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿಯಾದ ಶೋಭಾ ಕರಂದ್ಲಾಜೆಯವರು ಹಾಗೂ ಬೆಂಗಳೂರು ರಾಜಾಜಿನಗರದ ಶಾಸಕರೂ ಆಗಿರುವ ಸುರೇಶ್ ಕುಮಾರ್ ರವರು ನಗರ್ತಪೇಟೆಯಲ್ಲಿ ಸಾವಿರಾರು ‘ಜನರನ್ನು ಸೇರಿಸಿ ಪ್ರತಿಭಟನೆ ನಡೆಸಿದ್ದಾರೆಂದು ಮಾಧ್ಯಮಗಳಲ್ಲಿ ನೋಡಿ ಆತಂಕಿತರಾಗಿದ್ದೇವೆ ಎಂದಿದ್ದಾರೆ.
ಅಂಗಡಿಯೊಂದರಲ್ಲಿ ಜಗಳ ನಡೆದಿದ್ದು, ಅಂಗಡಿಯ ಮಾಲೀಕರು ಕೊಟ್ಟ ದೂರಿನನ್ವಯ ಹಲಸೂರು ಗೇಟ್ ಪೋಲಿಸ್ ಸ್ಟೇಷನ್ ನಲ್ಲಿ ಎಫ್.ಐ.ಆರ್. (49/2024) ಕೂಡಾ ದಾಖಲಾಗಿದೆ. ಅದರಲ್ಲಿ ಯಾವುದೇ ಧಾರ್ಮಿಕ ನೆಲೆಯ ಗಲಾಟೆಗಳ ಕುರಿತ ಅಂಶಗಳಿಲ್ಲ ಹಾಗೂ ಅಂತಹ ಯಾವ ಘಟನೆಗಳು ನಡೆದಿಲ್ಲ ಎಂಬ ಪೋಲೀಸರ ಹೇಳಿಕೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲಿ ಯಾವುದೇ ಘಟನೆ ನಡೆದಿದ್ದರೂ ಅದರ ಗಹನತೆಯನ್ನಾಧರಿಸಿ ಪೋಲೀಸರು ಕ್ರಮ ಕೈಗೊಳ್ಳುವುದು ನೆಲದ ಕಾನೂನಿನ ಪ್ರಕಾರ ನಡೆಯಬೇಕು. ಆದರೆ ನಡೆದ ಘಟನೆಗೆ ಕೋಮುವಾದದ ಬಣ್ಣ ಬಳಿದು ಅದನ್ನು ಕೋಮುದ್ವೇಷ ಹರಡಲು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯರವರು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಅವರ ಸಾಮಾಜಿಕ ಮಾಧ್ಯಮಗಳ ‘X’ ಮೂಲಕ (ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ಅವರು ಹಾಕಿರುವ ಹೇಳಿಕೆಯಲ್ಲಿ ಇದು ಸ್ಪಷ್ಟವಾಗುತ್ತದೆ. ತೇಜಸ್ವಿ ಸೂರ್ಯ(ಮೋದಿಯ ಪರಿವಾರ) ಹೆಸರಿನಲ್ಲಿ ಆ ಖಾತೆ ಇರುತ್ತದೆ. ಅವರು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ಮಾತನಾಡಿದ ವಿಡಿಯೋ ಯೂಟ್ಯೂಬ್ ನಲ್ಲಿ ಪ್ರಸಾರವಾಗಿದೆ. ಅವರ ಮಾತುಗಳು ಅತ್ಯಂತ ಪುಚೋದನಕಾರಿಯಾಗಿದ್ದು ಅನಗತ್ಯ ದೋಷಾರೋಪಣೆಯನ್ನೂ ಮಾಡುತ್ತಿರುವುದು ಕೇಳಿಬರುತ್ತಿದೆ ಎಂದು ಹೇಳಿದ್ದಾರೆ.
ದಿನಾಂಕ 19-03-2024ರಂದು ನಗರ್ತಪೇಟೆಯ ಬೀದಿಗಳಲ್ಲಿ ಹಿಂದೂ ಜಾಗರಣ ವೇದಿಕೆ,ಹಾಗೂ ಭಜರಂಗ ದಳದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ ಮತ್ತು ಆ ಪ್ರತಿಭಟನೆಯಲ್ಲಿ ಕೇಂದ್ರ ಸಚಿವ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರು ಹಾಗೂ ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ರವರು, ಸಂಸದ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಭಾವ್ಯ ಬಿ.ಜೆ.ಪಿ ಅಭ್ಯರ್ಥಿ ತೇಜಸ್ವಿ ಸೂರ್ಯರವರು ಭಾಗವಹಿಸಿದ್ದರು. ಪ್ರತಿಭಟನಾಕಾರರು ರಸ್ತೆಯ ಮೇಲೆ ಹನುಮಾನ್ ಚಾಲೀಸ್ ಪಠಣ ಮಾಡಲು ಕುಳಿತರೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ.
ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಿದೆ. ಇಡೀ ದೇಶದಲ್ಲೀಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳಾಗಿದ್ದವರು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅಲ್ಲದೇ, ಭಾರತದ ಸಂವಿಧಾನದ ಪ್ರತಿ ಕಲಮುಗಳನ್ನು ಎತ್ತಿ ಹಿಡಿಯಬೇಕು. ದೇಶದ ಸರ್ವೋಚ್ಚ ನ್ಯಾಯಾಲಯವೂ ಕೂಡ ದ್ವೇಷ ಪುಚೋದನೆಯ ಮಾತುಗಳನ್ನಾಡುವುದನ್ನು ನಿಗ್ರಹಿಸಬೇಕೆಂದು ಹಲವು ಬಾರಿ ಹೇಳಿದ. ಆದರೆ ಈ ಮೇಲೆ ಉಲ್ಲೇಖಿಸಿದ ಪ್ರಮುಖರು ಕೇಂದ್ರದಲ್ಲಿ ಸರಕಾರವನ್ನು ನಡೆಸುತ್ತಿರುವ, ರಾಷ್ಟ್ರೀಯ ಪಕ್ಷದ ಜನ ಪ್ರತಿನಿಧಿಗಳು.ದೇಶದ ಸಂವಿಧಾನವನ್ನು ಗೌರವಿಸಿ ಕಾಪಾಡುವ ಹೆಚ್ಚಿಸುವ ರೀತಿ ಕೆಲಸದಲ್ಲಿ ತೊಡಗುವ ಬದಲು ಕೋಮುದ್ವೇಷವನ್ನು ಪುಚೋದನಕಾರಿಯಾಗಿ ಮಾತನಾಡುತ್ತಿರುವುದು, ಜನರನ್ನು ದೊಂಬಿ ಗಲಭೆಗಳಿಗೆ ಪುಚೋದಿಸುತ್ತಿರುವುದು, ಧರ್ಮದ್ವೇಷಕ್ಕೆ ಪುಷ್ಟಿಕೊಡುತ್ತಿರುವುದು ದಂಡಸಂಹಿತೆಯ ಪುಕಾರ ಕೂಡ ಶಿಕ್ಷಾರ್ಹ ಅಪರಾಧವಾಗಿದೆ.
ಭಾರತೀಯ ಚುನಾವಣೆ ಘೋಷಣೆಯಾದ ಮರುಕ್ಷಣವೇ ನಡೆದ ಈ ಘಟನೆ ಮುಂಧಿನ ದಿನಗಳಲ್ಲಿ ಸಂವಿಧಾನ ತೆಗೆದುಕೊಳ್ಳಬಹುದಾದ ಹಲವು ಸೂಚನೆಯಾಗಿದೆ. ರೂಪಾಂತರಗಳ ಪ್ರೇಮಿಗಳಾದ ನಾವು ಈ ಘಟನೆಯಿಂದ ಆತಂಕಿತರಾಗಿದ್ದೇವೆ. ಚುನಾವಣಾ ಆಯೋಗವು ಈ ದಿಸೆಯಲ್ಲಿ ಗಂಭೀರವಾಗಿ ಚಿಂತಿಸಬೇಕು. ದೇಶದ ಜಾತ್ಯಾತೀತ,ಮತ ನಿರಪೇಕ್ಷ ಗುಣಗಳಿಗೆ ಮಸಿ ಬಳಿಯುವ ಪ್ರಯತ್ನವನ್ನು ಯಾರೇ ಮಾಡಿದರೂ, ಧರ್ಮ ಜಾತಿಗಳ ಹೆಸರಿನಲ್ಲಿ ದ್ವೇಷ,ಹಿಂಸೆ ಗಲಭ ಪುಚೋದಿಸುವ ಕೆಲಸ ಎಲ್ಲೇ ನಡೆದರೂ ಅಂತಹ ಶಕ್ತಿಗಳಿಗೆ ಯಾವುದೇ ಆಸ್ಪದ ನೀಡದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸದರಿ ಪುಕರಣದಲ್ಲಿ ಭಾಗಿಗಳಾದ ಮೂವರು ಸಂಸದರು ಮತ್ತು ಒಬ್ಬರು ಶಾಸಕರ ಮೇಲೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಾನು ‘ಅಂಗನವಾಡಿ ಕಾರ್ಯಕರ್ತೆ’ಯರ ಸಭೆ ನಡೆಸಿಲ್ಲ – ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ
ಸಾರ್ವಜನಿಕರೇ ಎಚ್ಚರ.! ‘ನೀತಿ ಸಂಹಿತೆ’ ವೇಳೆ ಈ ಎಲ್ಲವೂ ನಿಷೇಧ, ಉಲ್ಲಂಘಿಸಿದ್ರೆ ‘ಕೇಸ್ ಫಿಕ್ಸ್’