ಬೆಂಗಳೂರು : ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಬೇಸಿಗೆಯಲ್ಲಿ ಬಿಗ್ ಶಾಕ್ ಎದುರಾಗಿದೆ. 200 ಯೂನಿಟ್‌ಗಿಂತ ಜಾಸ್ತಿ ವಿದ್ಯುತ್ ಬಳಸಿದ ಶೇ. ೨೦ ರಷ್ಟು ಫಲಾನುಭವಿಗಳಿಗೆ ಫುಲ್ ಬಿಲ್ ಬಂದಿದೆ.
ಹೌದು, ಬರದ ಬೇಗೆಯಲ್ಲಿ ಬಸವಳಿದಿರುವ, ಸಾಮಾನ್ಯ ಜನರಿಗೆ ಗೃಹಜ್ಯೋತಿ ಯೋಜನೆಯಡಿ ೨೦೦ ಯೂನಿಟ್ ಗಿಂತ ಜಾಸ್ತಿ ವಿದ್ಯುತ್ ಬಳಸಿದ ಫಲಾನುಭವಿಗಳು ಬಳಸಿದ ಅಷ್ಟು ಯೂನಿಟ್‌ಗಳಿಗೆ ದುಬಾರಿ ಶುಲ್ಕವನ್ನು ಭರಿಸಬೇಕಾಗಿದೆ.
ಚುನಾವಣೆಗೂ ಮುನ್ನ ಪ್ರತಿ ಮನೆಗೆ 200 ಯೂನಿಟ್ ಕರೆಂಟ್ ಫ್ರೀ ಎಂದು ಹೇಳಿದ್ದ ಕಾಂಗ್ರೆಸ್, ಚುನಾವಣೆ ಬಳಿಕ ಕಂಡಿಷನ್ಸ್ ಅಪ್ಲೈ ಎಂದು ಹೇಳಿತ್ತು. ಈಗ ಕರ್ನಾಟಕದಲ್ಲಿ ಕಂಡು ಕೇಳರಿಯದಂತಹ ಬಿಸಿಲಿರುವ ಕಾರಣ ಗ್ರಾಹಕರು, 200 ಯೂನಿಟ್‌ಗಿಂತ ಜಾಸ್ತಿ ವಿದ್ಯುತ್ ಬಳಸಿದರೆ, ಬಳಸಿದ ಅಷ್ಟು ಯೂನಿಟ್‌ಗಳಿಗೆ ದುಬಾರಿ ಶುಲ್ಕವನ್ನು ಭರಿಸಬೇಕಾಗಿದೆ.
ರಾಜ್ಯದಲ್ಲಿ ಅಂದಾಜು 1.20 ಕೋಟಿ ಮಂದಿ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಎಸಿ, ಫ್ಯಾನ್, ಕೂಲರ್ ಬಳಕೆಯಿಂದಾಗಿ ಹೆಚ್ಚಿನ ವಿದ್ಯುತ್ ಬಳಸುತ್ತಿರುವ ಪರಿಣಾಮ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆಯಾಗುತ್ತಿದೆ. ಹೀಗಾಗಿ ಸಂಪೂರ್ಣ ಬಿಲ್ ಪಾವತಿ ಮಾಡಬೇಕಿರುವ ಅನಿವಾರ್ಯತೆಗೆ ಜನರು ಸಿಲುಕಿದ್ದಾರೆ.