ಬೆಂಗಳೂರು: ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಮಾರ್ಚ್.2024ರಲ್ಲಿ ನಡೆದಂತ ದ್ವಿತೀಯ ಪಿಯುಸಿ ಪರೀಕ್ಷೆ-1ರ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರವನ್ನು ಇಂದು ಮಂಡಳಿಯ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಮಂಡಳಿಯು, ದಿನಾಂಕ 01-03-2024ರಿಂದ 18-03-2024ರವರೆಗೆ ನಡೆದಂತ ದ್ವಿತೀಯ ಪಿಯುಸಿ ಪರೀಕ್ಷೆ-1ರ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ಪ್ರಕಟಿಸಲಾಗಿದೆ. ದಿನಾಂಕ 20-03-2024ರಿಂದ 22-03-2024ರವರೆಗೆ ನಡೆಯಲಿರುವಂತ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ನಂತರ ಪ್ರಕಟಿಸುವುದಾಗಿ ತಿಳಿಸಿದೆ.
ಇದೀಗ ಪ್ರಕಟಿಸಿರುವಂತ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರಗಳಲ್ಲಿ ದ್ವಂದ್ವಾರ್ಥ ಬರುವಂತ ಪ್ರಶ್ನೆಗಳು, ಅಪೂರ್ಣ ಪ್ರಶ್ನೆಗಳು, ಪಠ್ಯಕ್ರಮದಲ್ಲಿ ಇಲ್ಲದೇ ಇರುವಂತ ಪ್ರಶ್ನೆಗಳು, ಕನ್ನಡ ಮತ್ತು ಇಂಗ್ಲೀಷ್ ಆವೃತ್ತಿಯಲ್ಲಿ ಬೇರೆ ಬೇರೆ ಅರ್ಥ ಬರುವಂತಿದ್ದರೇ, ಒಂದು ಆಯ್ಕೆಗಿಂತ ಹೆಚ್ಚು ಆಯ್ಕೆಗಳು ಸರಿ ಇರುವ ಬಹು ಆಯ್ಕೆ ಪ್ರಶ್ನೆಗಳಿದ್ದರೇ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಕೋರಿದೆ.
ಈ ಆಕ್ಷೇಪಣೆಗಳನ್ನು ದಿನಾಂಕ 19-03-2024ರ ಇಂದಿನಿಂದ 21-03-2024ರ ಸಂಜೆ 5 ಗಂಟೆಯವರೆಗೆ ಸಲ್ಲಿಸೋದಕ್ಕೆ ಅವಕಾಶ ನೀಡಲಾಗಿದೆ. ಈ ದಿನಾಂಕದ ನಂತ್ರ ಬಂದಂತ ಆಕ್ಷೇಪಣೆಗಳನ್ನು ಪರಿಗಣಿಸೋದಿಲ್ಲ ಅಂತ ಹೇಳಿದೆ.
ಆಕ್ಷೇಪಣೆಗಳನ್ನು ಸಲ್ಲಿಸಲು ಹೀಗೆ ಮಾಡಿ
ವಿದ್ಯಾರ್ಥಿಗಳು, ಪೋಷಕರು ಮಾದರಿ ಉತ್ತರಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸೋದಕ್ಕೆ ಮಂಡಳಿಯ ಜಾಲತಾಣ www.kseab.karnataka.gov.in ಗೆ ಭೇಟಿ ನೀಡಬೇಕು. ಆನಂತ್ರ Latest News ಎಂಬಲ್ಲಿ ಕ್ಲಿಕ್ ಮಾಡಬೇಕು. ಬಳಿಕ Click here for filing objections for II PUC Examination -1 March 2024 Scheme of Evaluation ಎಂಬಲ್ಲಿ ಕ್ಲಿಕ್ ಮಾಡಿ, ನಿಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ದೇವೇಗೌಡರು ಅಳಿಯನನ್ನು ‘BJP ಚಿಹ್ನೆ’ಯಿಂದ ಸ್ಪರ್ಧೆ ಮಾಡಿಸಿದ್ದು ‘ಜೆಡಿಎಸ್’ನ ಮೊದಲ ಆತ್ಮಹತ್ಯೆ ಪ್ರಯತ್ನ: ಡಿಕೆಶಿ
ಮಿಸ್ಟರ್ ಡಿ.ಕೆ.ಶಿವಕುಮಾರ್, ಇವತ್ತು ‘ಜೆಡಿಎಸ್-ಬಿಜೆಪಿ ಮೈತ್ರಿ’ಗೆ ನೀವೇ ಕಾರಣ – H.D ಕುಮಾರಸ್ವಾಮಿ ಕಿಡಿ