ಶಿವಮೊಗ್ಗ: ಅರ್ಜಿದಾರರಾದ ಗೋವಿಂದನಾಯ್ಕರವರು ಕರ್ನಾಟಕ ಗ್ರಾಮೀಣ ಬ್ಯಾಂಕ್, ಆಯನೂರು, ಶಿವಮೊಗ್ಗ ಶಾಖೆ ಹಾಗೂ ಯೂನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪೆನಿ ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ವಿಮಾ ಮೊತ್ತ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.
ಅರ್ಜಿದಾರ ಗೋವಿಂದನಾಯ್ಕರು 2014 ರಲ್ಲಿ ಆಯನೂರಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಲ್ಲಿ ಉಳಿತಾದ ಖಾತೆ ಹೊಂದಿದ್ದು, ಈ ಖಾತೆಗೆ ಯೂನಿವರ್ಸಲ್ ಸೊಂಪೊ ಜನರಲ್ ಇನ್ಶೂರೆನ್ಸ್ ಕಂಪೆನಿಯಿಂದ ಕೆಬಿಎಲ್ ಸುರಕ್ಷಾ ಪಾಲಿಸಿ ಪಡೆದಿರುತ್ತಾರೆ. 2020 ರ ಜೂನ್ 2 ರಂದು ಎಲೆಕ್ಟ್ರಿಕ್ ಶಾಕ್‍ನಿಂದ ಅರ್ಜಿದಾರರು ಮೃತಪಟ್ಟಿದ್ದು ಮೃತರ ತಂದೆ ಬ್ಯಾಂಕ್ ಮತ್ತು ವಿಮಾ ಕಂಪೆನಿಯನ್ನು ಸಂಪರ್ಕಿಸಿ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಕೋರಿರುತ್ತಾರೆ.
ಆದರೆ ಬ್ಯಾಂಕ್‍ನವರು ಮೃತರ ಖಾತೆ ಮುಕ್ತಾಯಗೊಳಿಸಿರುವುದರಿಂದ ಕೆಬಿಎಲ್ ಸುರಕ್ಷಾ ಸರ್ಟಿಫಿಕೇಟ್ ಡೌನ್‍ಲೋಡ್ ಮಾಡಲು ಸಾಧ್ಯವಿಲ್ಲವೆಂದು ತಿಳಿಸಿರುತ್ತಾರೆ. ಹಾಗೂ ವಿಮಾ ಕಂಪೆನಿಯವರು ಪರಿಹಾರ ಕೋರಿಕೆ ಅರ್ಜಿ ತಡವಾಗಿ ಹಾಜರು ಮಾಡಿರುತ್ತಾರೆಂದು ಪರಿಹಾರ ಮೊತ್ತ ನೀಡಲು ನಿರಾಕರಿಸಿರುತ್ತಾರೆ.
ಆಯೋಗವು ಪ್ರಕರಣವನ್ನು ಕೂಲಂಕುಷವಾಗಿ ಪರಿಶೀಲಿಸಿ, ಬ್ಯಾಂಕ್‍ನವರು ಖಾತೆ ಮುಕ್ತಾಯಗೊಳಿಸುವ ಪೂರ್ವದಲ್ಲಿ ಸದರಿ ಖಾತೆಗೆ ಯಾವುದಾದರೂ ವಿಮೆ ಮಾಡಿಸಲಾಗಿದೆಯೇ ಎಂಬುದನ್ನು ತಪಾಸಣೆ ಮಾಡಿರುವುದಿಲ್ಲ ಮತ್ತು ಮೃತರ ಸಂಬಂಧಿಗಳಿಗೆ ಮಾಹಿತಿ ನೀಡಿರುವುದಿಲ್ಲ. ಅಲ್ಲದೇ ಆ ವೇಳೆ ಕೋವಿಡ್ ಲಾಕ್‍ಡೌನ್ ಸಹ ಇರುತ್ತದೆ. ಈ ಎಲ್ಲಾ ಕಾರಣದಿಂದ ಅರ್ಜಿದಾರರು ವಿಮಾ ಕಂಪೆನಿಗೆ ಅರ್ಜಿ ಸಲ್ಲಿಸಲು ತಡವಾಗಿರುತ್ತದೆ. ಆದ್ದರಿಂದ ಆಯೋಗವು 1ನೇ ಎದುರುದಾರ ಬ್ಯಾಂಕ್ ಮತ್ತು 2ನೇ ಎದುರುದಾರ ವಿಮಾ ಕಂಪನಿಯವರ ನಿರ್ಲಕ್ಷ್ಯತನದಿಂದ ಕೂಡಿದ ನಿರಾಕರಣೆ ಕಾರ್ಯವು ಸೇವಾನ್ಯೂನ್ಯತೆ ಎಂದು ಪರಿಗಣಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
ಎದುರುದಾರರಿಗೆ ನೋಟಿಸ್‍ಗಳನ್ನು ಆಯೋಗ ಜಾರಿಗೊಳಿಸಿದ ಸಂದರ್ಭದಲ್ಲಿ ವಿಮಾ ಕಂಪೆನಿ ಅರ್ಜಿದಾರರ ಖಾತೆಗೆ ವಿಮಾ ಮೊತ್ತ ರೂ.10,00,000/- ಗಳನ್ನು ಜಮೆ ಮಾಡಿರುತ್ತದೆ. ಹೀಗಾಗಿ ಆಯೋಗವು ಸದರಿ ಮೊತ್ತಕ್ಕೆ ಸಂಬಂಧಿಸಿದಂತೆ ಶೇ.10 ಬಡ್ಡಿ ಮೊತ್ತವನ್ನು 2ನೇ ಎದುರುದಾರರು, ರೂ.10,000 ಮಾನಸಿಕ ಪರಿಹಾರ ಹಾಗೂ ರೂ.15,000 ಗಳನ್ನು ನ್ಯಾಯಾಲಯದ ಖರ್ಚುವೆಚ್ಚಗಳ ಬಾಬ್ತು ಎಂದು 1 ಮತ್ತು 2ನೇ ಎದುರುದಾರರು ಪಾವತಿಸಬೇಕೆಂದು ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಇವರ ಪೀಠವು ಮಾ.14 ರಂದು ಆದೇಶಿಸಿರುತ್ತದೆ.
ಮಿಸ್ಟರ್ ಡಿ.ಕೆ.ಶಿವಕುಮಾರ್, ಇವತ್ತು ‘ಜೆಡಿಎಸ್-ಬಿಜೆಪಿ ಮೈತ್ರಿ’ಗೆ ನೀವೇ ಕಾರಣ – H.D ಕುಮಾರಸ್ವಾಮಿ ಕಿಡಿ