ವಿಜಯಪುರ: ಜಿಲ್ಲೆಯಲ್ಲಿ ನಿರ್ಮಾಣ ಹಂತದ ಕಾಂಪೌಂಡ್ ಒಂದು ಕುಸಿತಗೊಂಡ ಪರಿಣಾಮ, ಅದರಡಿ ಸಿಲುಗಿ ಓರ್ವ ಕಾರ್ಮಿಕ ಸಾವನ್ನಪ್ಪಿರೋ ಧಾರುಣ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ವಿದ್ಯುತ್ ಘಟಕ ನಿರ್ಮಾಣದ ಕಾಂಪೌಂಡ್ ನಿರ್ಮಿಸಲಾಗುತ್ತಿತ್ತು. ಈ ಕೆಲಸದಲ್ಲಿ ಮುದ್ದೇಬಿಹಾಳದ ಬಸವಲಿಂಗಯ್ಯ ಶಾಸ್ತ್ರಿ ಎಂಬುವರು ತೊಡಗಿದ್ದರು.
ನಿರ್ಮಾಣ ಹಂತದ ಕಾಂಪೌಂಡ್ ದಿಢೀರ್ ಕುಸಿತಗೊಂಡ ಪರಿಣಾಮ, ಬಸವಲಿಂಗಯ್ಯ ಶಾಸ್ತ್ರಿ ಅವರು ಅದರಡಿ ಸಿಲುಕಿ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾಂಪೌಂಡ್ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಂತ ಬಸವಲಿಂಗಯ್ಯ ಶಾಸ್ತ್ರಿ ಅವರ ಮೃತದೇಹವನ್ನು ಹೊರ ತೆಗೆದಿದ್ದಾರೆ.
ಮೃತ ಬಸವಲಿಂಗಯ್ಯ ಶಾಸ್ತ್ರಿ ಅವರು ಹಗರಿಬೊಮ್ಮನಹಳ್ಳಿಯ ನಿವಾಸಿ ಎಂಬುದಾಗಿ ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಮುದ್ದೇಬಿಹಾಳ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ನಾಳೆ ‘ವಿಶೇಷ ಸಾಂದರ್ಭಿಕ ರಜೆ’ ಮಂಜೂರು
ಶೇ.60ರಷ್ಟು ‘ಕನ್ನಡ ಬೋರ್ಡ್’ ಹಾಕದ ಮಳಿಗೆಗಳಿಗೆ ಬೀಗ ಹಾಕುವಂತಿಲ್ಲ: ರಾಜ್ಯ ಸರ್ಕಾರಕ್ಕೆ ‘ಹೈಕೋರ್ಟ್’ ಸೂಚನೆ