ಅಮೆರಿಕದ ಫ್ಲೋರಿಡಾದ ಜಾಕ್ಸನ್ವಿಲ್ಲೆ ಬೀಚ್ ನಗರದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಭಾನುವಾರ ರಾತ್ರಿ ನಗರದ ಡೌನ್ಟೌನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ, ಜಾಕ್ಸನ್ವಿಲ್ಲೆ ಬೀಚ್ ಪೊಲೀಸ್ ಇಲಾಖೆ “ಪ್ರಸ್ತುತ ನಮ್ಮ ಡೌನ್ಟೌನ್ ಪ್ರದೇಶದಲ್ಲಿ ಸಕ್ರಿಯ ಶೂಟರ್ ಘಟನೆಯ ಬಗ್ಗೆ ಕೆಲಸ ಮಾಡುತ್ತಿದೆ” ಎಂದು ಹೇಳಿದೆ.
ಅಪರಿಚಿತಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು 23,830 ಜನಸಂಖ್ಯೆಯನ್ನು ಹೊಂದಿರುವ ಜಾಕ್ಸನ್ವಿಲ್ಲೆ ಬೀಚ್ ಮಿಯಾಮಿಯಿಂದ ಸುಮಾರು ಐದು ಗಂಟೆಗಳ ದೂರದಲ್ಲಿದೆ.