ಬೆಂಗಳೂರು: ವಿಧಾನಸಭಾ ಕ್ಷೇತ್ರಗಳಲ್ಲಿನ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಕೊಠಡಿಗಳ ನಿರ್ಮಾಣ/ ದುರಸ್ಮಿ/ಇತರೆ ಕಾಮಗಾರಿಗಳಿಗೆ 4ನೇ ಕಂತಿನ ಅನುದಾನ ಬಿಡುಗಡೆ ಮಾಡಿ ಆದೇಶವನ್ನು ಹೊರಡಿಸಲಾಗಿದೆ. ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ಕೊಠಡಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಷರತ್ತುಗಳು ಹೀಗಿವೆ.
1. ನಿರ್ಮಾಣದ ಅವಶ್ಯವಿರುವ ಶಾಲೆಗಳನ್ನು ನಿಯಮಾನುಸಾರ ಪರಿಶೀಲಿಸಿ, ನಿರ್ಮಾಣಕ್ಕೆ ನಿವೇಶನದ ಲಭ್ಯತೆಯನ್ನು ಖಚಿತ ಪಡಿಸಿಕೊಂಡು, ಸ್ಯಾಟ್ಸ್/ ಡ್ರೆಸ್ ಮಾಹಿತಿಯನ್ವಯ ಶಾಲಾ ಪಟ್ಟಿಯನ್ನು ಮಾನ್ಯ ಶಾಸಕರಿಂದ ಪಡೆದು, ಪಿಆರ್‌ಇಡಿ/ ಪಿಡಬ್ಲ್ಯೂಡಿ ಇಲಾಖೆಯಿಂದ ಪಡೆದ ಅಂದಾಜು ಪಟ್ಟಿಗೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಅನುಮೋದನೆಯನ್ನು ಪಡೆಯುವುದು.
2. ಒಂದು ವೇಳೆ ಮಕ್ಕಳ ಸಂಖ್ಯೆ ಕಡಿಮೆ ಇದ್ದಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಯ ಅಳತೆಯಲ್ಲಿ ಕಡಿಮೆ ಮಾಡಿ ಅದಕ್ಕೆ ತಗಲುವ ವೆಚ್ಚವನ್ನು ಮಾತ್ರ ಅಂದಾಜು ಪಟ್ಟಿ ಮಾಡಿ ಖರ್ಚು ಭರಿಸಬಹುದಾಗಿದ್ದು, ಉಳಿಕೆ ಮೊತ್ತವನ್ನು ಸರ್ಕಾರಕ್ಕೆ ಮರುಭರಣ ಮಾಡುವುದು ಅಥವಾ ಅದೇ ಶಾಲೆಯ ಅವಶ್ಯಕತೆ ಇರುವ ಬೇರೆ ಕಾಮಗಾರಿಗಳಿಗೆ ಬಳಸಿಕೊಳ್ಳುವುದು.
3. 2022-23 ನೇ ಸಾಲಿನಲ್ಲಿ ನಿರ್ಮಾಣ ಮಾಡಲಾಗುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಕೊಠಡಿಗಳಿಗೆ ಸಂಬಂಧಿಸಿದಂತೆ ಹೊರಡಿಸಲಾಗುವ ಕಟ್ಟಡ ಕಾಮಗಾರಿಗಳ ಮಾರ್ಗಸೂಚಿ ಅನ್ವಯ ನಿಯಮಾನುಸಾರ ಆಡಳಿತಾತ್ಮಕ ಅನುಮೋದನೆಯನ್ನು ನೀಡುವ ಅಧಿಕಾರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪತ್ಯಾಯೋಜಿಸಿದ. ವಿವಿಧ ಕಾರಣಗಳಿಂದಾಗಿ ಆಡಳಿತಾತ್ಮಕ ಅನುಮೋದನ ನೀಡಲಾದ 2022-23ನೇ ಸಾಲಿನ ಕಾಮಗಾರಿಗಳ ಸ್ಥಳ ಬದಲಾವಣೆ ಮಾಡಬೇಕಾದ ಸಂದರ್ಭದಲ್ಲಿ, ಮಾರ್ಗಸೂಚಿಗೆ ಅನ್ವಯವಾಗುವ ಕಾಮಗಾರಿಗಳನ್ನು ಬದಲಾವಣೆ ಮಾಡುವ ಅಧಿಕಾರವನ್ನು ಹಾಗೂ ಮಂಜೂರಾದ ಅನುದಾನಕ್ಕಿಂತ ಹೆಚ್ಚುವರಿ ಅನುದಾನದ ಅವಶ್ಯಕತೆ ಇದ್ದಲ್ಲಿ, ಇತರ ಯೋಜನೆಗಳಲ್ಲಿ ಲಭ್ಯವಿರುವ ಉಳಿಕೆ ಅನುದಾನವನ್ನು ಉಪಯೋಗಿಸಿಕೊಂಡು ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಅಧಿಕಾರ ನೀಡಿದ.
4. ಈ ಮಾರ್ಗಸೂಚಿ ಹೊರತುಪಡಿಸಿ ವ್ಯತಿರಿಕ್ತ ಸನ್ನಿವೇಶಗಳಲ್ಲಿ ಕಾಮಗಾರಿ ಬದಲಾವಣೆ ಅವಶ್ಯಕತೆ ಇದ್ದಾಗ ಅಂತಹ ಪುಸ್ತಾವನೆಯನ್ನು ಸರ್ಕಾರದ ಅನುಮೋದನೆ ಪಡೆದು ಕಾಮಗಾರಿಗಳ ಶಾಲಾ ಬದಲಾವಣೆಗೆ ಅಗತ್ಯ ಕ್ರಮವಹಿಸುವುದು. ಶಾಲಾ ಕೊಠಡಿ ನಿರ್ಮಾಣ ಮಾಡಲು ನಿರ್ಧರಿಸಿರುವ ಜಾಗವನ್ನು ಅಭಿಯಂತರರ ಜೊತೆ ಸೇರಿ ಪರಿಶೀಲನ ನಡೆಸಬೇಕು. ಕಟ್ಟಡದ ವಿನ್ಯಾಸದ ಪುಕಾರ ಸುಣ್ಯದಲ್ಲಿ ನೆಲದ ಮೇಲೆ ಗುರುತು ಮಾಡಿ, ಕಟ್ಟಡದ Orientation ಅನ್ನು ನಿರ್ಧರಿಸಬೇಕು. ಈ ಜಾಗದಲ್ಲಿ ಯಾವುದೇ ಒಳ ಚರಂಡಿ, ನೀರಿನ ಕೊಳವೆ, ವಿದ್ಯುತ್ ತಂತಿಗಳು ಅಥವಾ ದೊಡ್ಡ ಮರಗಳ ಬೇರುಗಳು ಇಲ್ಲವೆಂದು ಖಚಿತ ಪಡಿಸಿಕೊಳ್ಳುವುದು. ನಿರ್ಧರಿತ ಜಾಗದಲ್ಲಿ ಮಳೆಯ ನೀರು ನಿಲ್ಲುವುದಿಲ್ಲವೆಂದು ನೋಡಿಕೊಳ್ಳಬೇಕು ಹಾಗೂ ಮಳೆಯ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕಾಗಿರುತ್ತದೆ. ಅದರಂತೆ, ಅಡಿಪಾಯದ ಎತ್ತರ ಸಹ ನಿರ್ಧರಿಸಬೇಕಾಗುತ್ತದೆ. ಕಟ್ಟಡಕ್ಕೆ ಗಾಳಿ ಮತ್ತು ಬೆಳಕು ಚೆನ್ನಾಗಿ ಬರುತ್ತದೆಂದು ಖಚಿತಪಡಿಸಿಕೊಳ್ಳುವುದು.
5. ಕಾಲಮ್ ಫೂಟಿಂಗ್‌ಗಳಿಗೆ ಸೂಕ್ತವಾದ ಮಣ್ಣಿನ ಸುರಕ್ಷಿತಕ್ಷಮತಾ ಸಾಮರ್ಥ್ಯವು 15T/M2 ಇರಬೇಕಾಗಿರುತ್ತದೆ. ಕಾಮಗಾರಿ ಪ್ರಾರಂಭಿಸುವ ಮೊದಲು ಸೂಕ್ತವಾದ ಮಣ್ಣಿನ ಪರೀಕ್ಷೆ ಆಧಾರದ ಮೇಲೆ ಮಣ್ಣಿನ ಸುರಕ್ಷಿತ ಕ್ಷಮತಾ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳುವುದು.
6. ಅಡಿಪಾಯಕ್ಕಾಗಿ ಗುಂಡಿಯನ್ನು ಅಗೆಯುವಾಗ ಗಟ್ಟಿಯಾದ ಸ್ತರಗಳವರೆಗೆ ಅಗೆಯಬೇಕು.
7. ಕಪ್ಪು ಹತ್ತಿ ಮಣ್ಣಿನ ಸಂದರ್ಭದಲ್ಲಿ, ಅಡಿಪಾಯವನ್ನು ವಿಶೇಷವಾಗಿ ಸಂಸ್ಕರಿಸಬೇಕು ಮತ್ತು ವಿನ್ಯಾಸಗಳನ್ನು ಅದಕ್ಕೆ ಅನುಗುಣವಾಗಿ ಮಾರ್ಪಡಿಸುವುದು.
8. ಅಡಿಪಾಯಕ್ಕಾಗಿ ಭೂಮಿಯನ್ನು ಅಗೆದಾಗ, ಜಲ್ಲಿ ಮಣ್ಣನ್ನು ಪದರಗಳಲ್ಲಿ ತುಂಬಬೇಕು ಮತ್ತು ಸೂಕ್ತವಾಗಿ ಹಾಗೂ ಸಮಯಕ್ಕೆ ಸರಿಯಾಗಿ ನೀರುಹಾಕಿ, ಬಡಿಯುವುದನ್ನು ಮಾಡಬೇಕು. ಅಗೆದಾಗ ಸಿಕ್ಕಿದ ಮಣ್ಣು ಉತ್ತಮ ಗುಣಮಟ್ಟದ ಮಣ್ಣಾಗಿರದಿದ್ದರೆ, ಬೇರೆಉತ್ತಮ ಮಣ್ಣಿನಿಂದ ತುಂಬಿಸಬೇಕು. Anti termite treatment ಅನ್ನು ನಿರ್ಧರಿತ ಕಟ್ಟಡದ ಜಾಗದಲ್ಲಿ ಕೊಡಬೇಕಾಗುತ್ತದೆ.
9. ಕಾಲಮ್ ಫೂಟಿಂಗ್, ಪ್ರಿಂತ್ ಬೀಮ್, ಕರ್ಟನ್ ವಾಲ್, ಲಿಂಟೆಲ್‌ಗಳು, ಕಾಲಮ್‌ಗಳು, ಬೀಮ್ ಮತ್ತು ಫೋರ್ / ರೂಫ್ ಫ್ಲ್ಯಾಬ್ ನಂತಹ ಎಲ್ಲಾ ರಚನಾತ್ಮಕ ಘಟಕಗಳಿಗೆ M-25 ದರ್ಜೆಯ ಕಾಂಕ್ರೀಟ್‌ಅನ್ನು ಮಾತ್ರ ಬಳಸಬೇಕು.
10. 40 ಎಂಎಂ ಡೌನ್‌ಜ್ ಜೆಲ್ಲಿಕಲ್ಲಿನೊಂದಿಗೆ, M-7.5ನ P.C.C ಅನ್ನು ಅಡಿಪಾಯ/ಫೂಟಿಂಗ್‌ನ ಕೆಳಗೆ ಮತ್ತು ಫ್ಲೋರಿಂಗ್‌ನ ಕೆಳಗೆ ಲೆವಲಿಂಗ್ ಕೋರ್ಸ್‌ನಂತೆ ಬಳಸಬೇಕು.
11. ಅಂದಾಜುವೆಚ್ಚದ ಒಳಗೆ ಬರುವಂತೆ, ತಂದೂರ್ ನೀಲಿ ಕಲ್ಲು / ಶಹಾಬಾದ್ ಕಲ್ಲು ಅಥವಾ ಸ್ಥಳೀಯವಾಗಿ ಸಿಗುವ ಕಲ್ಲಿನಿಂದ ನೆಲಹಾಸಿಗಾಗಿ ಬಳಸಬೇಕು.