ಎಸಿ, ಕೂಲರ್, ಫ್ಯಾನ್ ಗೆ ಬೇಡಿಕೆಯಲ್ಲಿ ಬೇಡಿಕೆ ಕೂಡ ಈಗ ಹೆಚ್ಚು. ಎಲ್ಲರಿಗೂ ಎಸಿ, ಕೂಲರ್ ಖರೀದಿ ಮಾಡಲು ಸಾಧ್ಯವಿಲ್ಲ. ಖರೀದಿಸಿದವರು ಕೂಡ ಇಡೀ ದಿನ ಅದ್ರ ಬಳಕೆ ಮಾಡಿದ್ರೆ ಕರೆಂಟ್ ಬಿಲ್ ಹೆಚ್ಚಿಗೆ ಬರುತ್ತದೆ. ಬೇಸಿಗೆಯಲ್ಲಿ ಎಸಿ ಇಲ್ಲ ಅಂತಾ ಚಿಂತೆ ಮಾಡ್ಬೇಡಿ. ಕೆಲ ಸರಳ ವಿಧಾನದ ಮೂಲಕ ಮನೆಯನ್ನು ಸದಾ ಕೂಲ್ ಆಗಿಡಿ.
ಸಾಮಾನ್ಯವಾಗಿ ನಾವು ಎದ್ದ ತಕ್ಷಣ ಕಿಟಕಿ, ಬಾಗಿಲುಗಳನ್ನು ತೆರೆಯುತ್ತೇವೆ. ಗಾಳಿ ಮನೆಯೊಳಗೆ ಬರಲಿ, ಮನೆ ತಂಪಾಗ್ಲಿ ಎಂದು ಇಡೀ ದಿನ ಬಾಗಿಲು ತೆರೆದಿಡ್ತೇವೆ.
ಆದರೆ ಮನೆಯ ಕಿಟಕಿ ಹಾಗೂ ಬಾಗಿಲುಗಳನ್ನು ಮುಚ್ಚಬೇಕು. ಮನೆಯ ಕಿಟಕಿ ಬಾಗಿಲುಗಳ ಮೂಲಕ ಮಾತ್ರ ಶಾಖವು ಮನೆಯೊಳಗೆ ಬರುತ್ತದೆ. ಆದ್ದರಿಂದ ನೀವು ಹಗಲಿನ ವೇಳೆಯಲ್ಲಿ ನಿಮ್ಮ ಮನೆಯ ಕಿಟಕಿಗಳನ್ನು ಮುಚ್ಚಿ.
ಬೇಸಿಗೆಯಲ್ಲಿ ಕಿಟಕಿಗಳ ಪರದೆಗಳನ್ನು ಸಹ ಬದಲಾಯಿಸಬಹುದು. ಬೇಸಿಗೆಯಲ್ಲಿ ಹತ್ತಿ ಪರದೆಗಳನ್ನು ಬಳಸುವುದು ಉತ್ತಮ.
ಮನೆಯ ಒಳಗಿನಿಂದ ಬಿಸಿ ಗಾಳಿಯನ್ನು ಹೊರ ಹಾಕಲು ಎಕ್ಸಾಸ್ಟ್ ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮ ಮನೆಯೊಳಗಿನ ಬಿಸಿ ಗಾಳಿಯನ್ನು ಹೊರ ಹಾಕುವ ಮೂಲಕ ಒಳಗಿನ ವಾತಾವರಣವನ್ನು ತಂಪಾಗಿರಿಸಲು ಇದು ಬಹಳಷ್ಟು ಸಹಾಯ ಮಾಡುತ್ತದೆ.
ಗಸಗಸೆ ಬೀಜಗಳು ಕೋಣೆ ಮತ್ತು ಮನೆಯನ್ನು ತಂಪಾಗಿಸಲು ನೆರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಿದೆ.
ನಿಮ್ಮ ಮನೆಯ ಬಾಗಿಲುಗಳ ಮೇಲೆ ಗಸಗಸೆ ಬೀಜಗಳ ಹಾಳೆಯನ್ನು ನೇತುಹಾಕಿ ಮತ್ತು ನಿಯಮಿತವಾಗಿ ನೀರನ್ನು ಅದಕ್ಕೆ ಹಾಕುವ ಮೂಲಕ ತೇವವಾಗಿರಿಸಿಕೊಳ್ಳಿ. ಇದ್ರಿಂದ ಮನೆ ವಾತಾವರಣದ ಬಿಸಿ ಕಡಿಮೆಯಾಗುತ್ತದೆ. ಸದಾ ಮನೆ ತಂಪಾಗಿರುತ್ತದೆ.
ವಿದ್ಯುತ್ ಉಪಕರಣಗಳು ಶಾಖವನ್ನು ಉತ್ಪಾದಿಸುತ್ತವೆ. ಹಾಗಾಗಿ ಬೇಸಿಗೆಯಲ್ಲಿ ವಿದ್ಯುತ್ ಉಪಕರಣಗಳ ಬಳಕೆಯನ್ನು ಕಡಿಮೆ ಮಾಡಿ. ಅವಶ್ಯಕತೆಯಿಲ್ಲ ಎನ್ನುವ ಸ್ಥಳದಲ್ಲಿ ವಿದ್ಯುತ್ ಉಪಕರಣಗಳನ್ನು ಬಳಸಬೇಡಿ. ಅಗತ್ಯವಿದೆ ಎನ್ನಿಸಿದ್ರೆ ಮಾತ್ರ ಸ್ವಿಚ್ ಆನ್ ಮಾಡಿ. ಬೇಡ ಎನ್ನಿಸಿದಾಗ ತೆಗೆಯಲು ಮರೆಯಬೇಡಿ.
ಮನೆಯಲ್ಲಿನ ಬೆಳಕು ಸಹ ಶಾಖವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿ ಹೆಚ್ಚು ವ್ಯಾಟ್ ಬಲ್ಬ್ ಗಳನ್ನು ಅಳವಡಿಸಿದ್ದರೆ, ನೀವು ಅವುಗಳನ್ನು ಎಲ್‌ಇಡಿ ಬಲ್ಬ್ ಗಳೊಂದಿಗೆ ಬದಲಾಯಿಸಬಹುದು. ಈ ಬಲ್ಬ್ಗಳು ಕಡಿಮೆ ಓಲ್ಟೇಜ್ ಮತ್ತು ಸಾಕಷ್ಟು ಬೆಳಕನ್ನು ನೀಡುತ್ತವೆ.