ಶಿವಮೊಗ್ಗ : ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡೇ ಮಾಡ್ತೀನಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಏನು ಹೇಳಿದ್ರೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಬಿ.ಎಸ್. ಯಡಿಯೂರಪ್ಪ ನನಗೆ ಮಾತ್ರ ಅಲ್ಲ ಎಲ್ಲರಿಗೂ ಮೋಸ ಮಾಡಿದ್ದಾರೆ. ದೆಹಲಿಯ ವರಿಷ್ಠರು ಯಡಿಯೂರಪ್ಪರನ್ನು ದೊಡ್ಡ ನಾಯಕ ಅಂದುಕೊಂಡಿದ್ದಾರೆ. ಇನ್ನೂ ಅವರು ಭ್ರಮೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕುರುಬರಿಗೆ ಒಂದೂ ಟಿಕೆಟ್ ಇಲ್ಲ. ಯಾಕೆ ಕುರುಬರು ಕಾಣಲಿಲ್ವಾ? ಕುರುಬರು ಬೆಳೆಯುವುದು ಬಿ.ಎಸ್.ಯಡಿಯೂರಪ್ಪಗೆ ಇಷ್ಟ ಇಲ್ಲ. ವರಿಷ್ಠರ ಬಳಿ ಪ್ರಸ್ತಾಪಿಸಿದ್ದರೆ ಕುರುಬರಿಗೆ ಟಿಕೆಟ್ ಕೊಡುತ್ತಿದ್ದರು. ಯತ್ನಾಳ್, ಸಿ.ಟಿ.ರವಿ, ಪ್ರತಾಪ್ ಸಿಂಹಗೆ ಟಿಕೆಟ್ ತಪ್ಪಿಸಿದ್ರು, ಶೋಕ ಕರಂದ್ಲಾಜೆಗೆ ಮಾತ್ರ ಟಿಕೆಟ್ ಕೊಡಿಸಿದ್ರು. ಹಿಂದುತ್ವದ ಪರ ಮಾತನಾಡುವವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.