ಬೆಳಗಾವಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ. ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ನಂತ್ರ, ಚುರುಕಾಗಿರೋ ಪೊಲೀಸರು ದಾಖಲೆಯಿಲ್ಲದೇ ಗೋಣಿಚೀಲದಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಂತ 2 ಲಕ್ಷ ಹಣವನ್ನು ಸೀಜ್ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಪೊಲೀಸರು ಲೋಕಸಭಾ ಚುನಾವಣೆ ಘೋಷಣೆಯ ನಂತ್ರ, ಚುನಾವಣಾ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸೋ ಕ್ರಮವಹಿಸಿದ್ದಾರೆ. ಬೆಳಗಾವಿಯ ಹಳ್ಳೂರು ಚೆಕ್ ಪೋಸ್ಟ್ ನಲ್ಲಿ ಆಲ್ಟೋ ಕಾರಿನಲ್ಲಿ ದಾಖಲೆಯಿಲ್ಲದೇ ಗೋಣಿಚೀಲದಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಂತ 2 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಲೋಕಸಭಾ ಚುನಾವಣೆ 2024 : ಕರ್ನಾಟಕದಲ್ಲಿ ಮೊದಲ, ಎರಡನೇ ಹಂತದಲ್ಲಿ ಯಾವ ಕ್ಷೇತ್ರಗಳಲ್ಲಿ ಮತದಾನ? ಇಲ್ಲಿದೆ ಮಾಹಿತಿ
ಬೆಂಗಳೂರು : ಭಾರತದಲ್ಲಿ 18ನೇ ಲೋಕಸಭಾ ಚುನಾವಣೆಗೆ ಮುಖ್ಯ ಚುನಾವಣಾ ಆಯೋಗ ದಿನಾಂಕವನ್ನ ಘೋಷಿಸಿದ್ದು, ದೇಶದಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದೆ. ಅದ್ರಂತೆ, ಏಪ್ರಿಲ್ 19ರಿಂದ ಲೋಕಸಭೆ ಚುನಾವಣೆ ಆರಂಭವಾಗಿದೆ. ಇನ್ನು ಜೂನ್ 4ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಅದೇ ರೀತಿಯಾಗಿ ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ 26ರಂದು ಮೊದಲನೇ ಹಂತದ ಮತದಾನ ನಡೆಯಲಿದ್ದು ಹಾಗೂ ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ ಎಂದು ದೆಹಲಿ ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ದಿನಾಂಕವನ್ನ ಪ್ರಕಟಿಸಿದ್ದಾರೆ.
ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಹಾಗೂ ಎರಡನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಹಾಗಾದರೆ ಮೊದಲ ಹಂತದಲ್ಲಿ ಯಾವ ಕ್ಷೇತ್ರಗಳಿಗೆ ಹಾಗೂ ಎರಡನೇ ಹಂತದಲ್ಲಿ ಯಾವ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಏಪ್ರಿಲ್ 26, ಮೇ 7ರಂದು ಮತದಾನ ಕರ್ನಾಟಕದಲ್ಲಿ ಏಪ್ರಿಲ್ 26ರಂದು ಹಾಗೂ ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ. ದಕ್ಷಿಣ ಕರ್ನಾಟಕ ಎರಡನೇ ಹಂತದಲ್ಲಿ ಮತದಾನ ನಡೆದರೆ, ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ.
ಏಪ್ರಿಲ್ 26ಕ್ಕೆ ಎಲ್ಲೆಲ್ಲಿ ಮತದಾನ?
1) ಚಿತ್ರದುರ್ಗ
2) ಉಡುಪಿ-ಚಿಕ್ಕಮಗಳೂರು
3) ದಕ್ಷಿಣ ಕನ್ನಡ
4) ಹಾಸನ
5) ತುಮಕೂರು
6) ಚಿಕ್ಕಬಳ್ಳಾಪುರ
7) ಕೋಲಾರ
8) ಮಂಡ್ಯ
9) ಮೈಸೂರು-ಕೊಡಗು
10) ಚಾಮರಾಜನಗರ
11) ಬೆಂಗಳೂರು ಗ್ರಾಮಾಂತರ
12) ಬೆಂಗಳೂರು ದಕ್ಷಿಣ
13) ಬೆಂಗಳೂರು ಉತ್ತರ
14) ಬೆಂಗಳೂರು ಕೇಂದ್ರ
ಮೇ 7ರಂದು ಎಲ್ಲೆಲ್ಲಿ ಮತದಾನ?
1) ಬೆಳಗಾವಿ
2) ಬಳ್ಳಾರಿ
3) ಚಿಕ್ಕೋಡಿ
4) ಹಾವೇರಿ-ಗದಗ
5) ಕಲಬುರಗಿ
6) ಬೀದರ್
7) ಹುಬ್ಬಳಿ – ಧಾರವಾಡ
8) ಕೊಪ್ಪಳ
9) ರಾಯಚೂರು
10) ಉತ್ತರ ಕನ್ನಡ
11) ದಾವಣಗೆರೆ
12) ಶಿವಮೊಗ್ಗ
13) ಬಾಗಲಕೋಟೆ
14) ವಿಜಯಪುರ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಕಾಂಗ್ರೆಸ್ ಸರ್ಕಾರ ಲೂಟಿಯಲ್ಲಿ ತೊಡಗಿದೆ : ಪ್ರಧಾನಿ ಮೋದಿ ವಾಗ್ದಾಳಿ
ಲೋಕಸಭಾ ಚುನಾವಣೆ : ಮಣಿಪುರ ಗಲಭೆಯ ಸಂತ್ರಸ್ತರಿಗೆ ನಿರಾಶ್ರಿತ ಕೇಂದ್ರದಿಂದಲೇ ಮತದಾನಕ್ಕೆ ಅವಕಾಶ!