ಬೆಂಗಳೂರು: ಲೋಕಸಭಾ ಚುನಾವಣೆ-2024ಕ್ಕೆ ದಿನಾಂಕ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ 2 ಹಂತಗಳಲ್ಲಿ ಲೋಕಸಭಾ ಚುನಾವಣೆ 28 ಕ್ಷೇತ್ರಗಳಿಗೆ ನಡೆಯಲಿದೆ. ಈ ಚುನಾವಣಾ ತಯಾರಿ ಸೇರಿದಂತೆ ಮಹತ್ವದ ಅಂಕಿ ಅಂಶಗಳನ್ನು ರಾಜ್ಯ ಚುನಾವಣಾ ಮುಖ್ಯ ಚುನಾವಣಾಧಿಕಾರಿ ಬಿಚ್ಚಿಟ್ಟಿದ್ದಾರೆ. ಆ ಬಗ್ಗೆ ಮುಂದೆ ಓದಿ.
ಇಂದು ಕೇಂದ್ರ ಚುನಾವಣಾ ಆಯುಕ್ತರು ಸುದ್ದಿಗೋಷ್ಠಿ ನಡೆಸಿ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದರು. ಈ ಬಳಿಕ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮಾಹಿತಿ ಹಂಚಿಕೊಂಡರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕದಲ್ಲಿ ಒಟ್ಟು 5,42,8,088 ಮತದಾರರಿದ್ದಾರೆ. 2,71,21,407 ಪುರುಷರು, 2,70,81,748 ಮಹಿಳಾ ಮತದಾರರು ಇದ್ದಾರೆ ಎಂಬುದಾಗಿ ತಿಳಿಸಿದರು.
ಕರ್ನಾಟಕದಲ್ಲಿ 4,933 ತೃತೀಯ ಲಿಂಗ ಮತದಾರರು ಇದ್ದಾರೆ. ರಾಜ್ಯದಲ್ಲಿ 18-19 ವರ್ಷದೊಳಗಿನ 11,24,622 ಯುವ ಮತದಾರರು ಇದ್ದಾರೆ. ರಾಜ್ಯದಲ್ಲಿ 5 ಎಸ್ಸಿ ಮೀಸಲು ಕ್ಷೇತ್ರ, 2 ಎಸ್ಟಿ ಮೀಸಲು ಕ್ಷೇತ್ರಗಳಿವೆ. ಮೂರನೇ ಹಂತದ ಚುನಾವಣೆಯಲ್ಲಿ ಸುರಪುರ ಕ್ಷೇತ್ರದ ಬೈ ಎಲೆಕ್ಷನ್ ನಡೆಯಲ್ಲಿದೆ ಎಂದು ತಿಳಿಸಿದರು.
ಹೀಗಿದೆ ಕರ್ನಾಟಕ ಲೋಕಸಭಾ ಚುನಾವಣೆ ಕ್ಷೇತ್ರಗಳ ಅಂಕಿ ಅಂಶಗಳ ಮಾಹಿತಿ
- ಕರ್ನಾಟಕದಲ್ಲಿ 85 ವರ್ಷ ಮೇಲ್ಪಟ್ಟ 5,70,168 ಮತದಾರರಿದ್ದಾರೆ
- ದಿವ್ಯಾಂಗ ಮತದಾರರು-6,12,154, ಬುಡಕಟ್ಟು ಮತದಾರರು-38,794
- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 31,74,098 ಮತದಾರು.
- ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 15,72,958 ಮತದಾರರು.
- ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 7,33,313 ಮತದಾರರು.
- ಚಿಕ್ಕಮಗಳೂರಿನ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 1,68,084 ಮತದಾರರು.
- ರಾಜ್ಯದಲ್ಲಿ ಲೋಕಸಭೆ ಚುನಾವಣೆಗೆ ಒಟ್ಟು ಮತಗಟ್ಟೆಗಳ ಸಂಖ್ಯೆ-58,834
- ಕರ್ನಾಟಕದಲ್ಲಿ ನಗರ ಪ್ರದೇಶಗಳಲ್ಲಿರುವ ಮತಗಟ್ಟೆಗಳ ಸಂಖ್ಯೆ -21,595
- ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಮತಗಟ್ಟೆಗಳ ಸಂಖ್ಯೆ-37,239
ಕರ್ನಾಟಕ ರಾಜ್ಯಕ್ಕೆ 6 ರಾಜ್ಯಗಳ ಗಡಿಗಳಿದ್ದಾವೆ. ಈ ಗಡಿಗಳಲ್ಲಿ ಚೆಕ್ ಪೋಸ್ಟ್ ರಚಿಸಲಾಗುತ್ತಿದೆ. 29 ಜಿಲ್ಲೆಗಳ ಜೊತೆಗೆ ಬಾರ್ಡರ್ ಬರಲಿದೆ. ಎಲ್ಲಾ ಕಡೆ ಚೆಕ್ ಪೋಸ್ಟ್ ನಿರ್ಮಿಸಲಾಗುತ್ತದೆ. ಈಗಾಗಲೇ ವಿಜಿಲೆನ್ಸ್ ಸ್ಟಾರ್ಟ್ ಮಾಡಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ನಾಲ್ಕು ಮತ್ತು ಐದನೇ ನ್ಯಾಯ್ ಗ್ಯಾರಂಟಿ ಘೋಷಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಕಾಂಗ್ರೆಸ್ ಸರ್ಕಾರ ಲೂಟಿಯಲ್ಲಿ ತೊಡಗಿದೆ : ಪ್ರಧಾನಿ ಮೋದಿ ವಾಗ್ದಾಳಿ