ನವದೆಹಲಿ: ಬೆ.ಮ.ಸಾ.ಸಂಸ್ಥೆಯ ಎಲೆಕ್ಟ್ರಿಕ್ ಬಸ್ ಬ್ರ್ಯಾಂಡಿಂಗ್ ” ಅಸ್ತ್ರ ” ಉಪಕ್ರಮಕ್ಕೆ ವಿಶೇಷ ಜ್ಯೂರಿ ಪ್ರಶಸ್ತಿ ಲಭಿಸಿರುತ್ತದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸಾರಿಗೆಯನ್ನು ಬ್ರ್ಯಾಂಡ್ ಗೊಳಿಸುವಲ್ಲಿ ಮುಂಚೂಣಿಯಲ್ಲಿದ್ದು, ಸಾಮಾನ್ಯ ಸಾರಿಗೆಯಿಂದ ಪ್ರಾರಂಭಿಸಿ ವಾಯು ವಜ್ರದವರೆಗೆ ಈಗ, ಇ-ಬಸ್ಸುಗಳ ಪರಿಚಯದೊಂದಿಗೆ, ಹೊಸ ಪ್ರಯಾಣಿಕರನ್ನು ವ್ಯವಸ್ಥೆಗೆ ಆಕರ್ಷಿಸಲು ಸಿಟಿ ಬಸ್ ವ್ಯವಸ್ಥೆಯನ್ನು ಬ್ರಾಂಡ್ ಮಾಡುವ ಅವಕಾಶವನ್ನು ಸಂಸ್ಥೆಯು ಬಳಸಿಕೊಂಡಿದೆ. ಹೊಸ ಎಲೆಕ್ಟ್ರಿಕ್ ಬಸ್ಸುಗಳು ಪ್ರಯಾಣಿಕರಿಗೆ ಆರಾಮದಾಯಕ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಪ್ರಯಾಣವನ್ನು ಒದಗಿಸುವ ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳೊಂದಿಗೆ ಬರುತ್ತಿವೆ. ಬೆ.ಮ.ಸಾ.ಸಂಸ್ಥೆಯು ತನ್ನ ವಿದ್ಯುತ್ ಚಾಲಿತ ಬಸ್ಸುಗಳನ್ನು ಸಂಸ್ಕೃತದಿಂದ ಪಡೆದ ವಿಶಿಷ್ಟ “ಅಸ್ತ್ರ” ಎಂಬ ಹೆಸರಿನ ಬ್ರ್ಯಾಂಡ್ ಮಾಡಲು ನಿರ್ಧಾರವನ್ನು ತೆಗೆದುಕೊಂಡಿತು.
ಸಮಾರಂಭದಲ್ಲಿ ಸಂಸ್ಥೆಯ ಮಾನ್ಯ ವ್ಯವಸ್ಥಾಪಕರಾದ ರಾಮಚಂದ್ರನ್. ಆರ್. ಭಾ.ಆ.ಸೇ. ರವರ ಪರವಾಗಿ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಸುನೀತಾ. ಜೆ. ಅವರು ರಾಷ್ಟ್ರೀಯ ರಸ್ತೆ ಮತ್ತು ಹೆದ್ದಾರಿಗಳ ಸಚಿವಾಲಯದ ಕಾರ್ಯದರ್ಶಿಗಳಾದ ಅನುರಾಗ ಜೈನ್, IAS ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
ಬೆಂಗಳೂರಿಗರೇ ಗಮನಿಸಿ: ಮಾ.15ರವರೆಗೆ ಕೆರೆಮಿತ್ರ ನೋಂದಣಿಗೆ ಅವಧಿ ವಿಸ್ತರಣೆ
ರಾಜ್ಯದ ರೈತರೇ ಗಮನಿಸಿ : ʻಕೃಷಿ ಭಾಗ್ಯʼ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ