ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಮೊಹಮ್ಮದ್ ಯಾಸಿನ್ ಮಲಿಕ್ ಬಣ) ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಶನಿವಾರ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ನಿಷೇಧಿತ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಪ್ರಚೋದಿಸುವ ಚಟುವಟಿಕೆಗಳಲ್ಲಿ ತೊಡಗಿದೆ. ರಾಷ್ಟ್ರದ ಭದ್ರತೆ, ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಪ್ರಶ್ನಿಸುವ ಯಾರಾದರೂ ಕಠಿಣ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಶಾ ಬರೆದಿದ್ದಾರೆ.
ಯಾಕೂಬ್ ಶೇಖ್ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಲೀಗ್ನ ನಾಲ್ಕು ಬಣಗಳಾದ ಜೆಕೆಪಿಎಲ್ (ಮುಖ್ತಾರ್ ಅಹ್ಮದ್ ವಾಜಾ), ಜೆಕೆಪಿಎಲ್ (ಬಶೀರ್ ಅಹ್ಮದ್ ತೋಟಾ), ಜೆಕೆಪಿಎಲ್ (ಗುಲಾಮ್ ಮೊಹಮ್ಮದ್ ಖಾನ್) ಮತ್ತು ಜೆಕೆಪಿಎಲ್ (ಅಜೀಜ್ ಶೇಖ್) ಅನ್ನು ‘ಕಾನೂನುಬಾಹಿರ ಸಂಘಗಳು’ ಎಂದು ಗೃಹ ಸಚಿವಾಲಯ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ‘ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿ’ಯನ್ನು ಅನುಸರಿಸಿ ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶಾ ಹೇಳಿದರು.
The Modi government has declared the ‘Jammu and Kashmir Liberation Front (Mohd. Yasin Malik faction)’ as an ‘Unlawful Association’ for a further period of five years.
The banned outfit continues to engage in activities that foment terror and secessionism in Jammu and Kashmir.…
— Amit Shah (Modi Ka Parivar) (@AmitShah) March 16, 2024