ಬೆಂಗಳೂರು : ರಾಜ್ಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು, ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರು ʻತತ್ಸಮಾನ ವೃಂದದʼ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ ನಡೆಸಲಿದ್ದು, ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.
2023-24ನೇ ಸಾಲಿಗೆ ರಾಜ್ಯದ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರು. ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (Specified Post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ ಉಲ್ಲೇಖ-1ರ ಪತ್ರದನ್ವಯ ಅಧಿಸೂಚನೆ ಮತ್ತು ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಅದರಂತೆ ಶಿಕ್ಷಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದು, ಸಲ್ಲಿಸಿರುವ ಅರ್ಜಿಯಲ್ಲಿ ನ್ಯೂನತೆಗಳಿದ್ದು ಅಂತಹವರು ಅರ್ಜಿಯನ್ನು ತಿದ್ದುಪಡಿ ಮಾಡಲು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಕೆಲವು ಶಿಕ್ಷಕರು ಕೋರಿರುತ್ತಾರೆ.
ಈ ಹಿನ್ನೆಲೆಯಲ್ಲಿ ಶಿಕ್ಷಕರ ಮನವಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕಾಲಾವಕಾಶವನ್ನು ವಿಸ್ತರಿಸಿ ನಿರ್ಧಿಷ್ಟಪಡಿಸಿದ ಹುದ್ದೆಗಳಿಗೆ ದಿನಾಂಕ: 23/02/2024ರವರೆಗೆ ಆನ್‌ಲೈನ್ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಲು ಹಾಗೂ ತಿದ್ದುಪಡಿ ಮಾಡಿ ಅರ್ಜಿ ಸಲ್ಲಿಸಲು ಉಲ್ಲೇಖ-2ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ ನಿಗಧಿಪಡಿಸಿದ ವೇಳಾಪಟ್ಟಿಯಲ್ಲಿ ಬದಲಾವಣೆಯಾಗುತ್ತಿದ್ದು ನಂತರದಲ್ಲಿ ವಿಸ್ತ್ರತವಾದ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿತ್ತು ಆದರಂತೆ ಪರಿಷ್ಕೃತ ವೇಳಾಪಟ್ಟಿ ಕೆಳಕಂಡಂತೆ ನಿಗದಿಪಡಿಸಿದೆ. ಮುಂದುವರೆದು ಉಲ್ಲೇಖಿತ-1 ಅಧಿಸೂಚನೆಯಲ್ಲಿನ ಅಂಶಗಳಲ್ಲಿನ ಕೆಲವು ಅಂಶಗಳಿಗೆ ಕೆಳಗಿನಂತೆ ಮಾರ್ಗದರ್ಶನವನ್ನು ನೀಡಲಾಗಿದೆ.
> ದಿನಾಂಕ: 16/012/2023 ರಂದು ಹೊರಡಿಸಿರುವ ಅಧಿಸೂಚನೆಯ ಪುಟ ಸಂಖ್ಯೆ-3ರ ಕ್ರ.ಸಂ- 12ರಲ್ಲಿ ‘ಅಂಗವಿಕಲ ಶಿಕ್ಷಕರು ಅರ್ಜಿ ಸಲ್ಲಿಸಲು ಅವಶಾಶವಿಲ್ಲ’ ಎಂಬುದನ್ನು ಕೈಬಿಡಲಾಗಿದೆ.
> ಪುಟ ಸಂಖ್ಯೆ-04ರಲ್ಲಿ ಕ್ರ.ಸಂ-12ರ 2ನೇ ಸಾಲಿನಲ್ಲಿ ಕನಿಷ್ಟ 5 ವರ್ಷ ಸೇವಾನುಭವ ಇರಬೇಕು ಎಂಬುದನ್ನು ‘ಕನಿಷ್ಠ 10 ವರ್ಷ ಸೇವಾನುಭವ’ ಎಂದು ಓದಿಕೊಳ್ಳತಕ್ಕದ್ದು
> ಪುಟ ಸಂಖ್ಯೆ-05ರಲ್ಲಿ ಗ್ರೂಪ್-ಬಿ ವೃಂದದ ಅರ್ಹತೆಗಳಲ್ಲಿ ಕ್ರ.ಸಂ-04ರಲ್ಲಿ ವಿಷಯ ಪರಿವೀಕ್ಷಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು “ಆಯಾ ವಿಷಯದಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ/ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಗಳಲ್ಲಿ/ಡಯಟ್‌ಗಳಲ್ಲಿ ಕನಿಷ್ಟ 10 ವರ್ಷಗಳಿಗೆ ಕಡಿಮೆ ಇಲ್ಲದಂತೆ’ ಎಂದು ಓದಿಕೊಳ್ಳತಕ್ಕದ್ದು.
> ಅಧಿಸೂಚನೆ ಪುಟ ಸಂಖ್ಯೆ-03ರ ಕ್ರ.ಸಂ-14, ಪುಟ ಸ-04ರ ಕ್ರ.ಸಂ-15, ಪುಟ ಸಂಖ್ಯೆ- 06ರ ಕ್ರ.ಸಂ-16ರಲ್ಲಿರುವ ಅಭ್ಯರ್ಥಿಗಳು ಹಾಗೂ ಕೌನ್ಸಿಲಿಂಗ್‌ಗೆ ಹಾಜರಾದ, ಖಾಲಿ ಇಲ್ಲದ ಕಾರಣ ಶಾಲೆಯಲ್ಲಿಯೇ ಮುಂದುವರೆದಿರುವವರು ಪ್ರಸ್ತುತ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಅರ್ಹರಿರುತ್ತಾರೆ” ಎಂದು ಓದಿಕೊಳ್ಳತಕ್ಕದ್ದು.