ಬೆಂಗಳೂರು: ಬೆಂಗಳೂರಿನ ಪ್ರತಿಷ್ಟಿತ ‘ಮಂತ್ರಿ ಮಾಲ್’ ಗೆ ಮತ್ತೆ ಬೀಗವನ್ನು ಬಿಬಿಎಂಪಿಯಿಂದ ಹಾಕಾಲಾಗಿದೆ. ಬರೋಬ್ಬರಿ 32 ಕೋಟಿ ಹಣದ ತೆರಿಗೆಯನ್ನು ಮಂತ್ರಿ ಮಾಲ್ ಅಡಳಿತ ಮಂಡಳಿ ಉಳಿಸಿಕೊಂಡಿದೆ ಎನ್ನಲಾಗಿದೆ.
ಇನ್ನೂ ಈ ಹಿಂದೆ ಕೂಡ ಮೂರ್ನಾಲ್ಕು ಬಾರಿ ಮಂತ್ರಿ ಮಾಲ್‌ಗೆ ಬೀಗವನ್ನು ಹಾಕಾಲಾಗಿತ್ತು, ಈಗ ಬೀಗ ಹಾಕುವುದರ ಜೊತೆಗೆ ಮಾಲ್‌ನ ಪರವಾನಗಿ ಕೂಡ ರದ್ದು ಮಾಡಿದೆ ಅಂತ ತಿಳಿದು ಬಂದಿದೆ.