ದಕ್ಷಿಣ ಉಕ್ರೇನ್ ನಗರ ಒಡೆಸಾದಲ್ಲಿನ ಮನೆಗಳ ಮೇಲೆ ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 16 ಜನರು ಸಾವನ್ನಪ್ಪಿದ್ದಾರೆ, ಮೃತರಲ್ಲಿ ಅರೆವೈದ್ಯಕೀಯ ಮತ್ತು ತುರ್ತು ಸೇವಾ ಕಾರ್ಯಕರ್ತ ಸೇರಿದ್ದಾರೆ. ಇಸ್ಕಂದರ್-ಎಂ ಕ್ಷಿಪಣಿಗಳಿಂದ ಕನಿಷ್ಠ 53 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ ಒಡೆಸಾದ ಕನಿಷ್ಠ 10 ಮನೆಗಳು ಮತ್ತು ಕೆಲವು ತುರ್ತು ಸೇವಾ ಉಪಕರಣಗಳು ಹಾನಿಗೊಳಗಾಗಿವೆ ಎಂದು ತುರ್ತು ಅಧಿಕಾರಿಗಳು ಮತ್ತು ಪ್ರಾದೇಶಿಕ ಗವರ್ನರ್ ಒಲೆಹ್ ಕಿಪರ್ ತಿಳಿಸಿದ್ದಾರೆ.
ರಕ್ಷಕರನ್ನು ಹೊಡೆಯುವ ಗುರಿಯೊಂದಿಗೆ ಅದೇ ಸ್ಥಳದಲ್ಲಿ ಎರಡನೇ ಕ್ಷಿಪಣಿಯನ್ನು ಹಾರಿಸುವ ತಂತ್ರವನ್ನು ಮಿಲಿಟರಿ ಪರಿಭಾಷೆಯಲ್ಲಿ ಡಬಲ್ ಟ್ಯಾಪ್ ಎಂದು ಕರೆಯಲಾಗುತ್ತದೆ. ಇಂತಹ ದಾಳಿಗಳು ಆಗಾಗ್ಗೆ ನಾಗರಿಕರ ಮೇಲೆ ಪರಿಣಾಮ ಬೀರುತ್ತವೆ.