ಶಿವಮೊಗ್ಗ: ಜಿಲ್ಲೆಯಲ್ಲಿ ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಬಂಡಾಯದ ಬಿಸಿ ಎದುರಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಘೋಷಣೆ ಮಾಡಿದ್ದಾರೆ. ಹಾಗಾದ್ರೇ ಅವರು ಇಂದು ಸುದ್ದಿಗೋಷ್ಠಿಯಲ್ಲಿ ಏನೆಲ್ಲಾ ಮಾತನಾಡಿದ್ರು ಅಂತ ಮುಂದೆ ಓದಿ.
ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಈ ಮೋದಿ ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ದ ಇದ್ದವರು. ಮೋದಿ ವಿರೋಧಿ ನಾನಲ್ಲ. ಇವತ್ತು ಅವರು ವಿಶ್ವ ನಾಯಕ ಎಂದರು.
ವಂಶ ಪಾರಂಪರ್ಯದ ಬಗ್ಗೆ ಹೆಚ್ಚು ಮಾತಾಡಲ್ಲ. ರಾಜ್ಯದ ಬಿಜೆಪಿ ಯಲ್ಲಿ ಕೂಡ ಕಾಂಗ್ರೆಸ್ ಸಂಸ್ಕ್ರತಿ ಬೆಳೆಯುತ್ತಿರುವುದು ದೌರ್ಭಾಗ್ಯ. ಕಳೆದ ವಿಧಾನಸಭೆ ಚುನಾವಣೆ ವೇಳೆ ನನಗಾದ ಅನ್ಯಾಯ ಸರಿಪಡಿಸುವ ಭರವಸೆ ಪಕ್ಷದ ನಾಯಕರಿಂದ ಸಿಕ್ಕಿತ್ತು. ಯಡಿಯೂರಪ್ಪ ಸಹ ಹಾವೇರಿಯಲ್ಲಿ ಕಾಂತೇಶ್ ಗೆ ಟಿಕೆಟ್ ಕೊಡಿಸಿ ಗೆಲ್ಲಿಸುವೆ ಎಂದಿದ್ದರು. ಆದರೆ ಅಲ್ಲಿ ಬೊಮ್ಮಾಯಿ ಮತ್ತು ಶೋಭಾ ಪರ ಮಾತ್ರ ಹಠ ಹಿಡಿದು ಟಿಕೆಟ್ ಕೊಡಿಸಿದ್ದಾರೆ ಎಂದು ವಾಗ್ಧಾಳಿ ನಡೆಸಿದರು.
ಹೈಕಮಾಂಡ್ ತೀರ್ಮಾನಕ್ಕೆ ಮುನ್ನ ಶೋಭಾ ಪರ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಸೂಚನೆಯನ್ನು ಹೇಗೆ ಕೊಟ್ಟರು. ಬೊಮ್ಮಾಯಿ ಕೂಡ ಕಾಂತೇಶ್ ಪರ ನಿಲುವು ವ್ಯಕ್ತಪಡಿಸಿದ್ದರು. ಬೊಮ್ಮಾಯಿಗೆ ಇಷ್ಟವಿಲ್ಲದಿದ್ದರೂ ಟಿಕೆಟ್ ಕೊಡಿಸಿದ್ದಾರೆ. ಶೋಭಾ ವಿರುದ್ದ ಕೂಗೆದ್ದರೂ ಟಿಕೆಟ್ ಕೊಡಿಸಿದ್ದಾರೆ ಎಂದರು.
ಸದಾನಂದ ಗೌಡ, ಸಿ.ಟಿ.ರವಿ, ಕಟೀಲು, ಪ್ರತಾಪ ಸಿಂಹ ಅವರು ಹಿಂದುತ್ವ ಪರ ಧ್ವನಿ ಎತ್ತಿದ್ದೇ ಟಿಕೆಟ್ ತಪ್ಪಲು ಕಾರಣ. ಒಬ್ಬ ಮಗ ಎಂ.ಪಿ. ಇನ್ನೊಬ್ಬ ಶಾಸಕ ಜೊತೆಗೆ ಜಿಜೆಪಿ ರಾಜ್ಯಾಧ್ಯಕ್ಷ. ನನ್ನ ಎದೆ ಬಗೆದರೆ ರಾಮ ಮತ್ತು ಮೋದಿ.. ಯಡಿಯೂರಪ್ಪ ಎದೆ ಬಗೆದರೆ ಇಬ್ಬರು ಮಕ್ಕಳು ಮತ್ತು ಶೋಭಾ. ಈಗ ಶೆಟ್ಟರ್ ಬೆಳಗಾವಿ ಅಭ್ಯರ್ಥಿ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅಂದರೆ ಅವರೇ ಹೈಕಮಾಂಡ್. ಮೋದಿ ಇಡೀ ದೇಶ ನನ್ನ ಪರಿವಾರ ಎಂದರೆ ರಾಜ್ಯದಲ್ಲಿ ಬಿಜೆಪಿ ಸ್ಥಿತಿಯು ಪರಿವಾರದ ಪರಿಕಲ್ಪನೆಯ ಕಾಂಗ್ರೆಸ್ ನಂತಾಗಿದೆ ಎಂದರು.
ಪಕ್ಷ ಬಿಟ್ಟು ಹೋಗಬಾರದು ಎಂದವ ನಾನು. ಆದರೆ ಪಕ್ಷವೇ ತಾಯಿ ಎಂದಾಗ ಆಕೆಯ ಕತ್ತು ಹಿಸುಕುವ ಪ್ರಯತ್ನ ನಡೆದಿರುವಾಗ ಸುಮ್ಮನೆ ಇರಬೇಕಾ.?
ಬೇಕಾದವರಿಗೆ ಟಿಕೆಟ್ ಕೊಡಿಸಿದೀರಲ್ಲ ಅದೆಷ್ಟು ಜನರ ಗೆಲ್ಲಿಸುವಿರೋ ನೋಡುವೆ. ಒಂದು ಕುಟುಂಬದ ಹಿಡಿತದಿಂದ ಪಕ್ಷ ತಪ್ಪಿಸಲು ನಾನು ಶಿವಮೊಗ್ಗ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುತ್ತೇನೆ. ಇದು ಉದ್ವೇಗದ ತೀರ್ಮಾನ ಅಲ್ಲ. ಸಿದ್ದಾಂತದ ನಿರ್ಧಾರ ಎಂಬುದಾಗಿ ಘೋಷಿಸಿದರು.
ಸ್ಪರ್ಧೆ ಮಾಡಿದರೆ ಪಕ್ಷ ನೋಟೀಸ್ ನೀಡಿ ಉಚ್ಚಾಟನೆ ಮಾಡಬಹುದು. ಚುನಾವಣೆ ಬಳಿಕ ಗೆದ್ದು ಮತ್ತೆ ಪಕ್ಷ ಸೇರ್ಪಡೆಗೆ ಅವಕಾಶ ಇದ್ದೇ ಇದೆ. ನಾನು ಮೋದಿ ಪರವಾಗಿಯೇ ನಾನಿರುತ್ತೇನೆ. ಚುನಾವಣೆಯಲ್ಲಿ ಈಗ ಬಿಜೆಪಿ ಟಿಕೆಟ್ ಪಡೆದವರೆಲ್ಲರಿಗಿಂತ ಒಂದು ಗುಲಗಂಜಿ ನಾನು ಹೆಚ್ಚಿದ್ದೇನೆ. ಈಶ್ವರಪ್ಪ ಯಾವುದೇ ಒಂದು ಜಾತಿಗೆ ಸೀಮಿತವಾದವನಲ್ಲ ಎಂಬುದು ಫಲಿತಾಂಶದ ಮೂಲಕ ಗೊತ್ತಾಗುತ್ತದೆ. ಮಾತು ಕೊಟ್ಟು ಮೋಸ ಮಾಡಿದವರಿಗೆ ಪಾಠ ಕಲಿಸೋಣ. ನಾಮಪತ್ರ ಸಲ್ಲಿಕೆಗೆ ಸಾಗರೋಪಾದಿಯಲ್ಲಿ ಅಭಿಮಾನಿಗಳು ಬರಬೇಕು. ಆ ಮೂಲಕ ಒಂದು ಕುಟುಂಬದ ಹಿಡಿತದಿಂದ ಪಕ್ಷವನ್ನು ಬಿಡಿಸೋಣ ಎಂದು ಹೇಳಿದರು.
ಈ ಸಭೆಯಲ್ಲಿ ಇಬ್ಬರು ಮಾಜಿ ಮೇಯರ್ ಗಳು, ಆರು ಮಂದಿ ಮಾಜಿ ಕಾರ್ಪೋರೇಟರ್ ಗಳು, ಬಾಹುಸಾರ ಕ್ಷತ್ರಿಯ ಸಮಾಜ, ಜಿಲ್ಲಾ ಬ್ರಾಹ್ಮಣ ಸಮಾಜ, ಕುರುಬರ ಸಮಾಜ, ವಿಪ್ರ ನೌಕರರ ಸಂಘ, ವೀರಶೈವ ಸಮಾಜ, ಶಿವಮೊಗ್ಗ ಅಷ್ಟೇ ಅಲ್ಲದೇ ಹಾವೇರಿ ಜಿಲ್ಲೆಯ ಪ್ರಮುಖರು ಭಾಗಿಯಾಗಿದ್ದರು.
ಒಟ್ಟಾರೆಯಾಗಿ ಶಿವಮೊಗ್ಗದಲ್ಲಿ ಬಿಜೆಪಿ ಬಂಡಾಯ ಧಗ ಧಗ ಶುರುವಾಗಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ನಿರ್ಧಾರ ಕೈಗೊಂಡಿದ್ದಾರೆ. ಶಿವಮೊಗ್ಗದಲ್ಲಿ ಇಂದು ನಿರ್ಧಾರವನ್ನು ಕೆ.ಎಸ್ ಈಶ್ವರಪ್ಪ ಪ್ರಕಟಿಸಿದ್ದಾರೆ. ಪುತ್ರ ಕಾಂತೇಶ್ ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ.
BREAKING: ‘ಶಿವಮೊಗ್ಗ ಲೋಕಸಭಾ ಕ್ಷೇತ್ರ’ದಿಂದ ‘ಸ್ವತಂತ್ರ ಅಭ್ಯರ್ಥಿ’ಯಾಗಿ ಸ್ಪರ್ಧೆ – ‘ಕೆಎಸ್ ಈಶ್ವರಪ್ಪ’ ಘೋಷಣೆ
ಬಿಹಾರ ಸಚಿವ ಸಂಪುಟ ವಿಸ್ತರಣೆ : ಮಾಜಿ ಡಿಸಿಎಂ ‘ರೇಣು ದೇವಿ ಸೇರಿ 21 ನಾಯಕ’ರು ‘ನಿತೀಶ್ ಕುಮಾರ್’ ಪಡೆಗೆ ಸೇರ್ಪಡೆ