ಬೆಂಗಳೂರು: ಆಹಾರ ಪದಾರ್ಥಗಳಲ್ಲಿ ಕೃತಕ, ಹಾನಿಕಾರಕ ಕಲರ್ ಬಳಸಬಾರದು ಎಂದು ಈಗಾಗಲೇ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ.
‘ಆನೆಗೊಂದಿ ಉತ್ಸವದಲ್ಲಿ’ ಉಳಿದ ಆಹಾರ ಸೇವಿಸಿ ’30 ಮೇಕೆಗಳ’ ಸಾವು : 180 ಮೇಕೆಗಳಿಗೆ ಚಿಕಿತ್ಸೆ
ಅತ್ಯಾಚಾರ ಪ್ರಕರಣ: ಪೊಲೀಸ್ ಕಾನ್ಸ್ಟೇಬಲ್ಗೆ 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್
ಈ ನಡುವೆ ಕಬಾಬ್ನಲ್ಲಿ ಕೂಡ ಕಲರ್ ಮಿಕ್ಸ್ ಮಾಡುತ್ತಿರುವುದು ಕೂಡ ಸರ್ಕಾರದ ಗಮನಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ಈ ಬಗ್ಗೆ ಕೂಡ ಕಲರ್ ಮಿಕ್ಸ್ ಮಾಡಿದ್ರೆ ಅವರ ವಿರುದ್ದ ಕೂಡ ಸೂಕ್ತ ಕ್ರಮ ಕೈಗೊಳ್ಳುವುದುಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಅಂದ ಹಾಗೇ ಆಕಸ್ಮಾತ್ ಕಬಾಬ್ನಲ್ಲೂ ಕಲರ್ ಬಳಸೋದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ ಅಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದ್ದಾರೆ. ಅವರು ಇಂದು ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳುತ್ತೆವೆ. ಇದರ ಹೊರತಾಗಿ ನಿಯಮ ಮೀರಿ ನಿಷೇಧಿತ ಪದಾರ್ಥಗಳನ್ನು ತಯಾರಿಸಿ ಜನರಿಗೆ ಮಾರಾಟ ಮಾಡಿದರೆ ಕಾನೂನು ಅನ್ವಯ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಇದಕ್ಕೆ 7 ವರ್ಷದವರೆಗೂ ಜೈಲು ಶಿಕ್ಷೆ ನೀಡಲು ಅವಕಾಶವಿದೆ ಎಂದು ಹೇಳಿದರು.